ಶುಕ್ರವಾರ, ಡಿಸೆಂಬರ್ 9, 2022
22 °C

ಶಾರುಕ್ ಸಿನಿಮಾ ಸ್ಕ್ರಿಪ್ಟ್ ಮೇಲೆ ಅವಲಂಬಿತ: ಮಣಿರತ್ನಂ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ ಬಾದ್‌ಶಾ ಶಾರುಕ್‌ ಖಾನ್‌ಗೆ ಸಿನಿಮಾ ಮಾಡುವ ಸುದ್ದಿ ಕುರಿತು ಖ್ಯಾತ ನಿರ್ದೇಶಕ ಮಣಿರತ್ನಂ ಕೊನೆಗೂ ಮೌನ ಮುರಿದಿದ್ದಾರೆ.

‘ಪೊನ್ನಿಯಿನ್‌ ಸೆಲ್ವನ್‌‘ ಚಿತ್ರದ ಪ್ರಚಾರದ ವೇಳೆ ಶಾರೂಕ್ ಜೊತೆ ಸಿನಿಮಾ ಮಾಡುವ ಕುರಿತಾದ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಣಿರತ್ನಂ ‘ನೀವು ಈ ಪ್ರಶ್ನೆಯನ್ನು ಶಾರುಕ್‌ ಬಳಿಯೇ ಕೇಳಬೇಕು.‌ ಎಲ್ಲವೂ ಸ್ಕ್ರಿಪ್ಟ್‌ ಮೇಲೆ ಅವಲಂಬಿತವಾಗಿದೆ. ಶಾರುಕ್‌ಗೆ ಸೂಕ್ತವಾದ ಸ್ಟ್ರಿಪ್ಟ್‌ ಬರೆದಾಗ ಅವರ ಬಳಿ ಹೋಗುತ್ತೇನೆ‘ ಎಂದಿದ್ದಾರೆ.

1998ರಲ್ಲಿ ತೆರೆಕಂಡ ಶಾರುಕ್‌ ಖಾನ್‌, ಮನೀಶಾ ಕೋಯಿರಾಲಾ, ಪ್ರೀತಿ ಜಿಂಟಾ ಜೋಡಿಯ ‘ದಿಲ್‌ ಸೆ‘ ಸಿನಿಮಾದ ಬಗ್ಗೆ ಕೇಳದವರು, ಈ ಸಿನಿಮಾವನ್ನು ನೋಡದಿರುವವರು ಯಾರಿದ್ದಾರೆ ಹೇಳಿ? ಖ್ಯಾತ ನಿರ್ದೇಶಕ ಮಣಿರತ್ನಂ ಹಾಗೂ ಬಾಲಿವುಡ್‌ ಬಾದ್‌ಶಾ ಶಾರುಕ್‌ ಜೋಡಿ ಮೋಡಿ ಮಾಡಿದ ಸಿನಿಮಾವಿದು. ಮಣಿರತ್ನಂ ಸಿನಿಮಾದ್ದು ಒಂದು ಲೆಕ್ಕವಾದರೆ, ಶಾರುಕ್‌ ಸಿನಿಮಾದ್ದು ಇನ್ನೊಂದು ಲೆಕ್ಕ‌ ಎಂಬಂತಿದ್ದ ಕಾಲದಲ್ಲಿ, ಇವರಿಬ್ಬರು ಸೇರಿ ಮಾಡಿದ ಸಿನಿಮಾ ಹೇಗಿರಬಹುದು ಎಂದು ತೋರಿಸಿಕೊಟ್ಟಿದ್ದು ‘ದಿಲ್‌ ಸೆ‘.

ಇದನ್ನೂ ಓದಿ: 

ಎರಡು ದಶಕಗಳ ನಂತರ ಮಣಿರತ್ನಂ ಹಾಗೂ ಶಾರುಕ್‌ ಖಾನ್‌ ಜೊತೆಯಾಗಿ ಮತ್ತೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಬಲವಾಗಿ ಹಬ್ಬಿತ್ತು. ’ನಾನೂ ಶಾರುಕ್‌ಗೆ ಸಿನಿಮಾ ಮಾಡಬೇಕೆಂದರೆ ನನ್ನ ಬಳಿ ಸ್ಕ್ರಿಪ್ಟ್‌ ಸಿದ್ಧವಿರಬೇಕು. ಎಲ್ಲವೂ ಕಥೆಯ ಮೇಲೆ ಅವಲಂಬಿತವಾಗಿದೆ. ಕಾರ್ಯಕ್ರಮದ ವೇಳೆ ನಾವಿಬ್ಬರು ಭೇಟಿಯಾಗಿದ್ದೆವು. ಆದರೆ ಇದಕ್ಕೂ ಸಿನಿಮಾಕ್ಕೂ ಸಂಬಂಧವಿಲ್ಲ. ಒಮ್ಮೆ ಅವರಿಗೆ ತಕ್ಕದಾದ ಕಥೆ ಸಿದ್ಧವಾದರೆ ಅವರ ಬಳಿ ಹೋಗುತ್ತೇನೆ’ ಎಂದು ಮಣಿರತ್ನಂ ಸ್ಪಷ್ಟಪಡಿಸಿದ್ದಾರೆ.

ಸದ್ಯ ಮಣಿರತ್ನಂ ಪೊನ್ನಿಯಿನ್‌ ಸೆಲ್ವಂ ಚಿತ್ರದ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ವಿಕ್ರಂ, ಕಾರ್ತಿ, ಐಶ್ವರ್ಯಾ ರೈ, ತ್ರಿಷಾ ಅಭಿನಯದ ಈ ಚಿತ್ರ ಸೆ.30ರಂದು ಐದು ಭಾಷೆಗಳಲ್ಲಿ ತೆರೆ ಕಾಣುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು