ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಶ್ವರ್ಯ ಸ್ಟೈಲಿಶ್‌ ಸ್ಟಾರ್‌

Last Updated 28 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ನವೆಂಬರ್‌ 1ಕ್ಕೆ ಏನು.. ಎಂದು ಕೇಳಿದರೆ, ರಾಜ್ಯೋತ್ಸವ ಎಂದು ಥಟ್ಟೆಂದು ಉತ್ತರಿಸುವವರೇ ಎಲ್ಲರೂ. ಆದರೆ ಅವತ್ತೇ ಐಶ್ವರ್ಯ ರೈಯ ಹುಟ್ಟುಹಬ್ಬವೂ ಹೌದು. ಅವತ್ತು ಆಕೆ ಅಧಿಕೃತವಾಗಿ 46 ವರ್ಷಕ್ಕೆ ಕಾಲಿಡಲಿದ್ದಾಳೆ. ಹಾಗೆಂದು ಆಕೆಯನ್ನು ನೋಡಿದರೆ ಹಾಗೆ ಅನ್ನಿಸುವುದೇ ಇಲ್ಲ! ಅದಕ್ಕೆ ತಕ್ಕಂತೆ ಇತ್ತೀಚೆಗೆ ಪತ್ರಿಕೆಯೊಂದು ಆಕೆಯನ್ನು ಈಗಿರುವ ‘ಮೋಸ್ಟ್‌ ಸ್ಟೈಲಿಸ್‌ ಸ್ಟಾರ್‌’ ಎಂದು ಬಿರುದು ಕೊಟ್ಟು ಗೌರವಿಸಿದೆ.

ಐಶ್ವರ್ಯ ನಟಿಸಿದ ಎರಡು ಚಿತ್ರಗಳು ಇದೀಗ ಬಿಡುಗಡೆಗೆ ಸಿದ್ಧವಾಗಿವೆ. ಏಪ್ರಿಲ್‌ 19ರಂದು ‘ಗುಲಾಬ್‌ ಜಾಮೂನ್‌’ ಬಿಡುಗಡೆಯಾಗಲಿದ್ದರೆ, ಏಪ್ರಿಲ್‌ 29ರಂದು ‘ಜಾಸ್ಮಿನ್‌: ಸ್ಟೋರಿ ಆಫ್‌ ಅ ಲೀಸ್ಡ್‌ ವೂಂಬ್’ ಬಿಡುಗಡೆಯಾಗಲಿದೆ. ಅನುರಾಗ್‌ ಕಶ್ಯಪ್‌ ನಿರ್ದೇಶನದ ಸಸ್ಪೆನ್ಸ್ ಪೊಲೀಸ್‌ ಸ್ಟೋರಿ– ಗುಲಾಬ್‌ ಜಾಮೂನ್‌–ನಲ್ಲಿ ಅಭಿಷೇಕ್‌ ಬಚ್ಚನ್ನೇ ಹೀರೊ. ‘ಜಾಸ್ಮಿನ್‌’ ಚಿತ್ರದಲ್ಲಿ ಐಶ್ವರ್ಯ ಬಾಡಿಗೆ ತಾಯಿಯ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾಳೆಂಬ ಸುದ್ದಿಯಿದೆ.

ಅಂದ ಹಾಗೆ, ಐಶ್ವರ್ಯ ರೈ ಬಚ್ಚನ್‌ ಗರ್ಭಿಣಿ ಅಲ್ಲವಂತೆ; ಇತ್ತೀಚೆಗೆ ಆಕೆಯ ಗರ್ಭಿಣಿಯಂತೆ ಕಾಣುವ ಫೋಟೋವೊಂದು ವೈರಲ್‌ ಆದದ್ದು ಅಭಿಮಾನಿಗಳಲ್ಲಿ ಪುಳಕ– ಆತಂಕ ಎರಡನ್ನೂ ಮೂಡಿಸಿತ್ತು. ಆದರೆ ಆ ಫೋಟೋ ಸೈಡ್‌ಪೋಸ್‌ ತೆಗೆದದ್ದರಿಂದ ಆಕೆ ಗರ್ಭಿಣಿಯಂತೆ ಕಾಣಿಸಿದ್ದಾಳೆ, ನಿಜಕ್ಕೂ ಎರಡನೆಯ ಮಗುವಿನ ಯಾವ ಸೂಚನೆಗಳೂ ಇಲ್ಲ ಎಂದು ಆಕೆಯ ಕುಟುಂಬ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT