ಬೆಂಗಳೂರು: ಪ್ರತಿಷ್ಠಿತ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ರೆಡ್ ಕಾರ್ಪೆಟ್ನಲ್ಲಿ ಈ ಸಾರಿಯೂ ಬಾಲಿವುಡ್ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಹೆಜ್ಜೆ ಹಾಕಿ ಮಿಂಚಿದ್ದಾರೆ. ಇಷ್ಟು ಸಾರಿ ಅವರು ತಮ್ಮ ಬಗೆ ಬಗೆಯ ದಿರಿಸುಗಳಿಂದ ಗಮನ ಸೆಳೆಯುತ್ತಿದ್ದ ನಟಿ ಈ ಸಾರಿ ಗಮನ ಸೆಳೆದಿದ್ದು ಮಾತ್ರ ಬೇರೆ ರೀತಿ.

ಫ್ರಾನ್ಸ್ನ ಕಾನ್ ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ (2025) ಐಶ್ವರ್ಯಾ ಅವರು ಅತ್ಯಾಕರ್ಷಕ ಐವರಿ ಬಣ್ಣದ ಸೀರೆಯ ಜೊತೆ ಹಣೆಗೆ ಸಿಂಧೂರವನ್ನು ಧರಿಸಿದ್ದರು. ಅಷ್ಟೇ ಅಲ್ಲದೇ ಸಿಂಧೂರ ಎದ್ದು ಕಾಣುವ ಹಾಗೇ ಹೇರ್ಸ್ಟೈಲ್ ಕೂಡ ಮಾಡಿದ್ದರು.

ಇತ್ತೀಚೆಗೆ ಭಾರತ, ಉಗ್ರಗಾಮಿಗಳನ್ನು ಬೆಂಬಲಿಸುವ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ಎಂಬ ಸೇನಾ ಕಾರ್ಯಾಚರಣೆ ನಡೆಸಿತ್ತು. ಇದರ ಬೆಂಬಲವಾಗಿ ಐಶ್ವರ್ಯ ಅವರು ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಐಶ್–ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿತ್ತು. ಆದರೆ ಐಶ್ವರ್ಯಾ ಅವರು ಕಾನ್ ಚಿತ್ರೋತ್ಸವದ ಮೂಲಕ ಆ ಗಾಸಿಪ್ಗಳಿಗೂ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ.

ಜಗತ್ತಿನ ಖ್ಯಾತ ನಟ, ನಟಿಯರು, ಮಾಡೆಲ್ಗಳು ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಾರೆ. ವಾರಗಳ ಕಾಲ ನಡೆಯುವ ಈ ಉತ್ಸವದ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕುವುದು, ಸಿನಿಮಾ, ಜಾಹೀರಾತು, ಧಾರಾವಾಹಿ ಮಂದಿಗೆ ದೊಡ್ಡ ಆಸೆ.

ಮೊದಲು ‘ಫ್ರಾನ್ಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ ಎಂದು ಗುರುತಿಸಿಕೊಂಡಿದ್ದ ಕಾನ್ ಚಿತ್ರೋತ್ಸವ ಫ್ರಾನ್ಸ್ನ ಬೀಚ್ ನಗರಿ ಕಾನ್ನ ಸೌಂದರ್ಯದಿಂದಾಗಿ ಇತ್ತೀಚೆಗೆ ಕಾನ್ ಚಿತ್ರೋತ್ಸವ ಎಂದು ಖ್ಯಾತಿಯಾಗಿದೆ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ಈ ಸಿನಿ ಉತ್ಸವ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.