ಶುಕ್ರವಾರ, ಜನವರಿ 27, 2023
26 °C

ಅಟ್ಯಾಕ್‌: ಜಾನ್‌ ಜೊತೆ ಜಾಕ್ವೆಲಿನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನಟ ಜಾನ್‌ ಅಬ್ರಹಾಂ ಹಾಗೂ ಜಾಕ್ವೆಲಿನ್‌ ಫರ್ನಾಂಡಿಸ್‌ ಮತ್ತೊಂದು ಬಾರಿ ಹೊಸ ಚಿತ್ರದಲ್ಲಿ ಒಟ್ಟಿಗೆ ನಟಿಸಲಿದ್ದಾರೆ. ‘ಅಟ್ಯಾಕ್‌’ ಚಿತ್ರದಲ್ಲಿ ಜಾಕ್ವೆಲಿನ್‌ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಈ ಸಂಗತಿಯನ್ನು ಜಾಕ್ವೆಲಿನ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಘೋಷಣೆ ಮಾಡಿದ್ದು, ‘ಜಾನ್‌ ಅಬ್ರಹಾಂ ನಟನೆಯ ಮುಂದಿನ ಚಿತ್ರದಲ್ಲಿ ಅವರ ಜೊತೆ ನಟಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

 ಜಾನ್‌ ಅಬ್ರಹಾಂ ಹಾಗೂ ಜಾಕ್ವೆಲಿನ್‌ ಫರ್ನಾಂಡಿಸ್ ‘ಡಿಶ್ಯೂಂ’, ‘ಹೌಸ್‌ಫುಲ್‌ 2’ ಹಾಗೂ ‘ರೇಸ್‌ 2’ ಸೇರಿ ಮೂರು ಚಿತ್ರಗಳಲ್ಲಿ ಜೊತೆಗೆ ನಟಿಸಿದ್ದರು. ಇದು ಈ ಜೋಡಿಯ ಒಟ್ಟಿಗೆ ನಟಿಸುತ್ತಿರುವ ನಾಲ್ಕನೇ ಚಿತ್ರ. ‘ಅಟ್ಯಾಕ್‌’ ಚಿತ್ರವು ಆಗಸ್ಟ್‌ 14ರಂದು ಬಿಡುಗಡೆಯಾಗಲಿದೆ.

ಜಾನ್ ಅಬ್ರಹಾಂ ನಟನೆಯ ಚಿತ್ರವೊಂದುಸ್ವಾತಂತ್ರ್ಯ ದಿನಾಚರಣೆ ಸಂದರ್ಭಕ್ಕೆ ಬಿಡುಗಡೆಯಾಗುತ್ತಿರುವುದು ಇದು ಮೂರನೇ ಬಾರಿ. ‘ಸತ್ಯಮೇವ  ಜಯತೇ’ ಹಾಗೂ ‘ಬಟ್ಲಾ ಹೌಸ್‌’ ಕ್ರಮವಾಗಿ 2018 ಹಾಗೂ 2019ರ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಿತ್ತು. 

ಆ್ಯಕ್ಷನ್‌ ಥ್ರಿಲ್ಲರ್‌ ‘ಅಟ್ಯಾಕ್‌’ ಚಿತ್ರದಲ್ಲಿ ರಕುಲ್‌ ಪ್ರೀತ್‌ ಸಿಂಗ್‌ ಕೂಡ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು