‘ರೂಅಫ್ಜಾ’ ತಂಪು ಪಾನೀಯ ಅಂದುಕೊಂಡ್ರಾ? ಹೆಸರಷ್ಟೇ ರೂಅಫ್ಜಾ ಆದರೆ, ಇದು ಸಿನಿಮಾದ ಹೆಸರು. ಹೌದು, ಕ್ಯೂಟ್ ಜಾನ್ವಿ ಕಪೂರ್ ಅಭಿನಯಿಸುತ್ತಿರುವ ಹೊಸ ಚಿತ್ರವಿದು. ಕಾಮಿಡಿ ಹಾರರ್ ಸಿನಿಮಾ ಇದಾಗಿದ್ದು, ಇದರಲ್ಲಿ ಜಾನ್ವಿ ರಾಜ್ಕುಮಾರ್ ರಾವ್ಗೆ ಜೋಡಿಯಾಗಿದ್ದರೆ. ಫಕ್ರೆ, ದಿಲ್ವಾಲೆ ಸಿನಿಮಾಗಳಲ್ಲಿ ಅಭಿನಯಿಸಿದ್ದ ವರುಣ್ ಶರ್ಮಾ ಕೂಡ ಈ ಚಿತ್ರದಲ್ಲಿದ್ದಾರೆ. ದಿನೇಶ್ ವಿಜೆನ್ ಚಿತ್ರದ ನಿರ್ಮಾಪಕ. ಚಿತ್ರಕ್ಕೆ ಹಾರ್ದಿಕ್ ಮೆಹ್ತಾ ನಿರ್ದೇಶನವಿದೆ.

‘ಧಡಕ್’ಸಿನಿಮಾದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ ಜಾನ್ವಿ, ನಂತರ ಕರಣ್ ಜೋಹರ್ ನಿರ್ದೇಶನ ‘ತಕ್ತ್’ನಲ್ಲಿ ಅಭಿನಯಿಸಿದ್ದರು. ಈಗ ‘ರೂಅಫ್ಜಾ’ದಲ್ಲಿ ಜಾನ್ವಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಉತ್ತರ ಪ್ರದೇಶದ ಮುರದಾಬಾದ್ನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಜನಪದ ಕಥೆಯನ್ನಾಧರಿಸಿದ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಮಾಟಗಾತಿಯ ಪಾತ್ರವೂ ಇದೆಯಂತೆ. ಈ ಹಿಂದೆ ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್ ಕೂಡಾ ‘ಸ್ತ್ರೀ’ ಎನ್ನುವ ಜನಪದ ಕಥೆಯನ್ನಾಧರಿಸಿದ ಚಿತ್ರದಲ್ಲಿ ಅಭಿನಯಸಿದ್ದರು. ‘ರೂಅಫ್ಜಾ’ ಕೂಡಾ ಇದೇ ಮಾದರಿಯ ಸಿನಿಮಾ ಎನ್ನಲಾಗುತ್ತಿದೆ. ಮದುವೆಯಾದ ರಾತ್ರಿಯಂದು ಮಾಟಗಾತಿಯೊಬ್ಬಳು ನವವಧು–ವರರ ಹತ್ತಿರ ಬಂದು ಜೋಗುಳ ಹಾಡುತ್ತಾಳೆ. ರಾತ್ರಿಯಿಡೀ ವರ ಎಚ್ಚರವಿದ್ದರೆ ಅವನು ಸುರಕ್ಷಿತವಾಗಿರುತ್ತಾನೆ. ಅಕಸ್ಮಾತ್ ಅವನೇನಾದರೂ ನಿದ್ದೆಗೆ ಜಾರಿದರೆ ಜೀವನಪರ್ಯಂತ ಈ ದಂಪತಿಗಳು ಮಾಟಗಾತಿಯ ಕಾಟ ಸಹಿಸಿಕೊಳ್ಳಬೇಕಾಗುತ್ತದೆ ಎನ್ನುವ ಒನ್ ಲೈನ್ ಸ್ಟೋರಿ ಎಳೆಯನ್ನು ಚಿತ್ರದ ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ.

ರೂಅಫ್ಜಾ 2020ರ ಮಾರ್ಚ್ 20ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.