ಭಾನುವಾರ, ಮಾರ್ಚ್ 26, 2023
23 °C

ಮಿಸ್ ಯೂ ಅಮ್ಮ: ಶ್ರೀದೇವಿ ಜನ್ಮದಿನದಂದು ಮಗಳು ಜಾಹ್ನವಿಯ ಹೃದಯ ಸ್ಪರ್ಶಿ ಪೋಸ್ಟ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಇಂದು, ಬಾಲಿವುಡ್‌ನ ಖ್ಯಾತ ನಟಿ, ದಿವಂಗತ ಶ್ರೀದೇವಿ ಅವರ 57ನೇ ಜನ್ಮ ದಿನಾಚರಣೆ. ಈ ಹಿನ್ನೆಲೆಯಲ್ಲಿ ಅವರ ಪುತ್ರಿ ನಟಿ ಜಾಹ್ನವಿ ಕಪೂರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಮ್ಮನ ಜೊತೆಗಿನ ಬಾಲ್ಯದ ಚಿತ್ರವೊಂದನ್ನು ಹಂಚಿಕೊಂಡಿದ್ದು, ಹೃದಯ ಸ್ಪರ್ಶಿ ಪೋಸ್ಟ್ ಮಾಡಿ್ದ್ದಾರೆ.

‘ಜನ್ಮದಿನದ ಶುಭಾಶಯಗಳು ಮಮ್ಮಾ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಪ್ರತಿದಿನ, ಯಾವಾಗಲೂ ಎಲ್ಲವೂ ನಿಮಗಾಗಿ, ನಾನು ನಿಮ್ಮನ್ನು ಪ್ರೀತಿಸುತ್ತೇನೆ.’ಎಂದು ಜಾಹ್ನವಿ ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ವರ್ಷ ಶ್ರೀದೇವಿಯ ಪುಣ್ಯ ತಿಥಿ ಸಂದರ್ಭದಲ್ಲಿ ಜಾಹ್ನವಿ ಅವರು ತನ್ನ ತಾಯಿ ತನಗೆ ಬರೆದಿದ್ದ ಹೃದಯಸ್ಪರ್ಶಿ ಸಂದೇಶವನ್ನು ಹಂಚಿಕೊಂಡಿದ್ದರು. ಅದರಲ್ಲಿ ‘ನಾನು ನಿನ್ನನ್ನು ಪ್ರೀತಿಸುತ್ತೇನೆ, ನನ್ನ ಲಬ್ಬು. ನೀನು ಜಗತ್ತಿನ ಅತ್ಯುತ್ತಮ ಮಗು’ ಎಂದು ಶ್ರೀದೇವಿ ಬರೆದಿದ್ದರು.

ಈ ಮಧ್ಯೆ, ಶ್ರೀದೇವಿಯವರ ಎರಡನೇ ಪುತ್ರಿ ಖುಷಿ ಕಪೂರ್, ತಾಯಿ ಶ್ರೀದೇವಿ ಮತ್ತು ತಂದೆ ಬೋನಿ ಕಪೂರ್ ಅವರ ಥ್ರೋಬ್ಯಾಕ್ ಫೋಟೋವನ್ನು ಪೋಸ್ಟ್ ಮಾಡಿದ್ದು, ‘ಐ ಲವ್ ಯೂ’ಎಂದು ಬರೆದಿದ್ದಾರೆ.

2018 ರಲ್ಲಿ ಮೋಹಿತ್ ಮರ್ವಾ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ದುಬೈನ ಹೋಟೆಲ್‌ ಬಾತ್ ಟಬ್‌ನಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದ್ದರು. ಅದೇ ವರ್ಷ ಪುತ್ರಿ ಜಾಹ್ನವಿ ಕಪೂರ್ ಅವರು, ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು