ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಕ ಇಳಿಕೆಗೆ ಜಾಹ್ನವಿ ಸಾಹಸ

Last Updated 31 ಜುಲೈ 2019, 19:30 IST
ಅಕ್ಷರ ಗಾತ್ರ

ತೂಕ ಹೆಚ್ಚಿಸಿಕೊಳ್ಳುವುದು, ಇಳಿಸಿಕೊಳ್ಳುವುದು ಜಾಹ್ನವಿ ಕಪೂರ್‌ಗೆ ದೊಡ್ಡ ವಿಷಯವಲ್ಲವೇನೋ? ಧಡಕ್‌ ನಟಿ ‘ಕಾರ್ಗಿಲ್‌ ಗರ್ಲ್‌’ ಸಿನಿಮಾಕ್ಕಾಗಿ 6 ಕೆ.ಜಿ ತೂಕ ಹೆಚ್ಚಿಸಿಕೊಂಡು ದಪ್ಪಗಾಗಿದ್ದರು. ಅದೇ ಸಮಯದಲ್ಲಿ ಚಿತ್ರೀಕರಣಗೊಂಡಮತ್ತೊಂದು ಹಾರರ್‌ ಕಾಮಿಡಿ ಚಿತ್ರ ‘ರೂಹಿಅಫ್ಜಾ’ಕ್ಕಾಗಿ 10 ಕೆ.ಜಿ ತೂಕವನ್ನು ಇಳಿಸಿಕೊಂಡಿದ್ದರು. ಈಗ ‘ಕಾರ್ಗಿಲ್‌ ಗರ್ಲ್‌’ ಉಳಿದ ಭಾಗದ ಚಿತ್ರೀಕರಣ ಜಾರ್ಜಿಯಾದಲ್ಲಿ ಆರಂಭವಾಗಿದ್ದು, ಜಾಹ್ನವಿ ವಾಪಸ್‌ ತೂಕ ಜಾಸ್ತಿ ಮಾಡಿಕೊಳ್ಳಬೇಕಾಗಿದೆ.

ತೂಕ ಹೆಚ್ಚಿಸಿಕೊಳ್ಳಲು ಜಾಹ್ನವಿ ಕಪೂರ್‌, ನಮ್ರತಾ ಪುರೋಹಿತ್‌ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಕಾರ್ಗಿಲ್‌ ಗರ್ಲ್‌ ಸಿನಿಮಾವು ಭಾರತೀಯ ವಾಯುಪಡೆಯ ಮೊದಲ ಮಹಿಳಾ ಕ್ಯಾಪ್ಟನ್‌ ಗುಂಜನ್‌ ಸಕ್ಸೇನಾ ಅವರ ಜೀವನಕತೆ ಆಧರಿಸಿದ ಚಿತ್ರ. ಈ ಚಿತ್ರದ ಮೊದಲರ್ಧಕ್ಕಾಗಿ ಕೇವಲ 45 ದಿನಗಳಲ್ಲಿ ಜಾಹ್ನವಿ 6 ಕೆ.ಜಿ ತೂಕ ಜಾಸ್ತಿ ಮಾಡಿಕೊಂಡಿದ್ದರು.

ನಂತರ ರೂಹಿಅಫ್ಜಾಕ್ಕಾಗಿ 10 ಕೆ.ಜಿ ಕಡಿಮೆ ಮಾಡಿಕೊಳ್ಳುವ ಟಾರ್ಗೆಟ್‌ ನೀಡಲಾಗಿತ್ತು. ಈಗ ‘ಕಾರ್ಗಿಲ್‌ ಗರ್ಲ್‌’ ಸಿನಿಮಾದ ಉಳಿದ ಭಾಗಕ್ಕೆ ಸಿದ್ಧತೆಯನ್ನು ಜಾಹ್ನವಿ ಮಾಡುತ್ತಿದ್ದು, ವಾಪಸ್‌ ತೂಕ ಹೆಚ್ಚಿಸಿಕೊಳ್ಳಬೇಕಿದೆ. ಇದಕ್ಕಾಗಿ ಕಠಿಣ ಅಭ್ಯಾಸದಲ್ಲಿ ಜಾಹ್ನವಿ ತೊಡಗಿದ್ದಾರೆ. ಆಕೆ ವಾರದಲ್ಲಿ ಆರು ದಿನ, 3–4 ಗಂಟೆ ದಿನಾಲೂ ಅಭ್ಯಾಸ ಮಾಡುತ್ತಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT