ಮುಂಬೈ: ಗುರುವಾರ ತೆರೆ ಕಂಡ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಜವಾನ್ ಒಂದೇ ದಿನದಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹129.6 ಕೋಟಿ ಬಾಚಿದೆ.

ಈ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಶಾರುಖ್ ಚಿತ್ರ ಹೊಸ ದಾಖಲೆ ಬರೆದಿದೆ.

ಈ ಕುರಿತಂತೆ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ಇದು ಕೇವಲ ಆರಂಭ ಮಾತ್ರ. ಇಷ್ಟು ದೊಡ್ಡ ಪ್ರೀತಿ ನೀಡಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದೆ. ಮೊದಲ ದಿನ ₹129.6 ಕೋಟಿ ಗಳಿಸಿದ ಜವಾನ್. ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ವಿಶ್ವದಾದ್ಯಂತ ಮೊದಲ ದಿನದ ಅತ್ಯಧಿಕ ಗಳಿಕೆ ಎಂಬ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿದೆ.

ಚಿತ್ರರಂಗದ ಉದ್ಯಮ ವಿಶ್ಲೇಷಕ ತರನ್ ಆದರ್ಶ್ ಸಹ ವಿದೇಶಗಳಲ್ಲಿ ಜವಾನ್ ಗಳಿಕೆಯ ಎಕ್ಸ್‌ಕ್ಲೂಸಿವ್ ಮಾಹಿತಿ ಹಂಚಿಕೊಡಿದ್ದಾರೆ.

ಅಂತರರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲಿ ಜವಾನ್ ಉತ್ತಮ ಗಳಿಕೆ ಮೂಲಕ ವಿದೇಶಗಳಲ್ಲಿಯೂ ಶಾರುಖ್ ತಮ್ಮ ಸಾರ್ವಭೌಮತೆಯನ್ನು ಸಾಬೀತು ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ 3,98,030 ಡಾಲರ್(₹2.11 ಕೋಟಿ), ನ್ಯೂಜಿಲೆಂಡ್ 79,805 ಡಾಲರ್( ₹ 39.13 ಲಕ್ಷ), ಜರ್ಮನಿಯಲ್ಲಿ ₹1.3 ಕೋಟಿ, ಬ್ರಿಟನ್‌ನಲ್ಲಿ ₹2.16 ಕೋಟಿ ಗಳಿಕೆ ಕಂಡಿದೆ ಎಂದು ಅವರು ಹೇಳಿದ್ದಾರೆ.

ಚಿತ್ರದಲ್ಲಿ ಶಾರುಖ್ ಜೊತೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಮಣಿ ತೆರೆ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.