ಬುಧವಾರ, ಜೂನ್ 29, 2022
24 °C

ಮೊದಲ ಸಿನಿಮಾದ ನೆನಪು: 4 ದಶಕ ಹಿಂದಿನ ಫೋಟೊ ಹಂಚಿಕೊಂಡ ನಟಿ ಜಯಪ್ರದಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಜಯಪ್ರದಾ... ಇದು ಭಾರತೀಯ ಸಿನಿಮಾ ರಂಗದ ಜನಪ್ರಿಯ ಹೆಸರು.

ತೆಲುಗು ಭಾಷೆಯ 'ಭೂಮಿ ಕೋಸಂ' ಸಿನಿಮಾ ಮೂಲಕ 1974ರಲ್ಲಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದ ಈ ನಟಿ, ಮೇರು ನಟ ಡಾ.ರಾಜ್‌ ಕುಮಾರ್‌, ಅಮಿತಾಭ್‌ ಬಚ್ಚನ್, ರಿಷಿ ಕಪೂರ್‌, ರಜಿನಿಕಾಂತ್‌, ಕಮಲ್‌ ಹಾಸನ್‌ ಅವರಂತಹ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡವರು. ಎಂಟು ಭಾಷೆಗಳ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದೀಗ ಇವರು, ತಮ್ಮ ಮೊದಲ ಸಿನಿಮಾದ ಚಿತ್ರೀಕರಣ ಸಂದರ್ಭದ ಚಿತ್ರವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ನೆನಪಿನಂಗಳಕ್ಕೆ ಜಾರಿದ್ದಾರೆ.

ಇದನ್ನೂ ಓದಿ: 

ಕೆ.ಬಿ.ತಿಲಕ್‌ ನಿರ್ದೇಶನದ 'ಭೂಮಿ ಕೋಸಂ' ಸಿನಿಮಾದ ಚಿತ್ರೀಕರಣದ ವೇಳೆ ಸೆರೆಹಿಡಿಯಲಾಗಿರುವ ಈ ಚಿತ್ರದಲ್ಲಿ, ಜಯಪ್ರದಾ ಅವರು ಜಮೀನಿನಲ್ಲಿ ಕೆಲಸ ಮಾಡುವವರಿಗೆ, ನೀರು ಮತ್ತು ಆಹಾರವನ್ನು ತೆಗೆದುಕೊಂಡು ಬರುತ್ತಿರುವುದು ಸೆರೆಯಾಗಿದೆ.

ಈ ಚಿತ್ರದೊಂದಿಗೆ ಅವರು, 'ನಾನು ನನ್ನ ಸಿನಿಮಾದಲ್ಲಿ ಮೊದಲ ಶಾಟ್‌ ಎದುರಿಸುತ್ತಿರುವುದು' ಎಂದು ಬರೆದುಕೊಂಡಿದ್ದಾರೆ.

ಬುಧವಾರ ಹಂಚಿಕೊಂಡಿರುವ ಈ ಚಿತ್ರವನ್ನು ಸಾವಿರಾರು ಜನರು ಮೆಚ್ಚಿಕೊಂಡಿದ್ದಾರೆ. 'ಹೌದು ಇದು ನಿಮ್ಮ ಮೊದಲ ಸಿನಿಮಾ. ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ' ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಇವನ್ನೂ ಓದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು