ಕಾಲಿವುಡ್ನ ಖ್ಯಾತ ನಟ ಜಯಂ ರವಿ ಅಭಿನಯದ 25ನೇ ಚಿತ್ರ ‘ಭೂಮಿ’. ಈ ಚಿತ್ರವು ಜನವರಿ 15ಕ್ಕೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಲಿದೆ. ಹಳ್ಳಿಯ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಜಯಂರವಿ ರೈತನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಲಕ್ಷ್ಮಣ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸುಜಾತ ವಿಜಯ್ಕುಮಾರ್ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ.

ನಿಧಿ ಅಗರ್ವಾಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸತೀಶ್, ರೋನಿತ್ ರಾಯ್, ತಂಬಿ ರಾಮಯ್ಯ, ರಾಧಾ ರವಿ, ಶರಣ್ಯ ಪೊನ್ವನ್ ಮೊದಲಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಜಯಂರವಿ ಹಾಗೂ ಲಕ್ಷಣ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ 3ನೇ ಚಿತ್ರ ಇದು. ಈ ಹಿಂದೆ ‘ರೋಮಿಯೊ ಜ್ಯೂಲಿಯೆಟ್’ ಹಾಗೂ ‘ಬೋಗನ್’ ಸಿನಿಮಾಗಳಲ್ಲಿ ಇವರು ಒಟ್ಟಿಗೆ ಕೆಲಸ ಮಾಡಿದ್ದರು. ನಿಧಿ ಹಾಗೂ ರೋನಿತ್ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದಾರೆ. ಖಳನಾಯಕನಾಗಿ ನಟಿಸಿರುವ ರೋನಿತ್ ಈ ಹಿಂದೆ ಜ್ಯೂನಿಯರ್ ಎನ್ಟಿಆರ್ ನಟನೆಯ ತೆಲುಗಿನ ‘ಜೈ ಲವ ಕುಶ’ದಲ್ಲಿ ನಟಿಸಿದ್ದರು.

ತ್ರಿಭಂಗಾ– ಟೆಡಿ ಮೆಡಿ ಕ್ರೇಜಿ
ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ‘ತ್ರಿಭಂಗಾ’ ಹಿಂದಿ ಚಿತ್ರ ಜನವರಿ 15ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ರೇಣುಕಾ ಸಹಾನೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾಕ್ಕೆ ಅಜಯ್ ದೇವಗನ್ ಅವರ ಎಫ್ಫಿಲ್ಮ್ಸ್, ಬನಿಜಯ್ ಗ್ರೂಪ್ ಏಷ್ಯಾ ಹಾಗೂ ಅಲ್ಕೆಮಿ ಫಿಲ್ಮ್ಸ್ ಹಣ ಹೂಡಿಕೆ ಮಾಡಿವೆ. ಕಾಜಲ್, ತನ್ವಿ ಅಜ್ಮಿ ಹಾಗೂ ಮಿಥಿಲಾ ಪಾಲ್ಕರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರವು ಒಂದೇ ಕುಟುಂಬದ 3 ತಲೆಮಾರುಗಳ ಸುತ್ತ ಸುತ್ತುವ ಕಥೆಯಾಗಿದೆ.

ಕುನಾಲ್ ರಾಯ್ ಕೌರ್, ವೈಭವ್ ತಟವಾಡಿ, ಮಾನವ್ ಗೊಹಿಲ್, ಕನ್ವಲ್ಜಿತ್ ಸಿಂಗ್, ಶ್ವೇತಾ ಮೆಹಂದಳೆ, ನಿಶಾಂಕ್ ವರ್ಮಾ ಮೊದಲಾದವರ ತಾರಾಗಣವಿದೆ. ಈ ಚಿತ್ರದ ಪೂರ್ಣ ಶೂಟಿಂಗ್ ಮುಂಬೈನಲ್ಲಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.