ಬುಧವಾರ, ಆಗಸ್ಟ್ 17, 2022
29 °C

ಮಡಿಕೇರಿ ಮಂಜಿನಲ್ಲಿ ‘ಜೆರ್ಸಿ ನಂ.10‘ ಚಿತ್ರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೇತನ್‌ ಎಸ್‌. ನಿರ್ದೇಶಿಸುತ್ತಿರುವ ‘ಜೆರ್ಸಿ ನಂ.10’ ಚಿತ್ರಕ್ಕೆ ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.

ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುನೀಲ್ ಸುಬ್ರಮಣ್ಯ ಹಾಗೂ ವೀಣಾ ಅಚಯ್ಯ, ಬಿ.ಎ. ಹರೀಶ್, ದೀನ್ ಬೋಪಣ್ಣ, ಸತ್ಯಪ್ಪನ್, ವಿಶ್ವನಾಥನ್, ನಂಗಾಯಲ್ ಅವರು ಚಿತ್ರದ ಮುಹೂರ್ತದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಾಯಕನಾಗಿ ಆದ್ಯ ಪೂವಣ್ಣ, ಎರಡನೇ ನಾಯಕನಾಗಿ ಚಂದನ್‌ ಆಚಾರ್‌ ಮತ್ತು ಎರಡನೇ ನಾಯಕಿಯಾಗಿ ಅನುಷ್ಕಾ ಹೆಗ್ಡೆ, ಪೋಷಕ ಪಾತ್ರಗಳಲ್ಲಿ ಜೈಜಗದೀಶ್, ಮಂಡ್ ಯರಮೇಶ್, ದತ್ತಣ್ಣ, ಥ್ರಿಲ್ಲರ್ ಮಂಜು, ಟೆನ್ನಿಸ್ ಕೃಷ್ಣ, ಜ್ಯೋತಿ ರೈ, ಹೇಮಂತ್ ಕುಮಾರ್, ಶ್ರೀ ಹರ್ಷವರ್ಧನ್, ಸೌರಬ್, ರಾಘವೇಂದ್ರ, ಜಕ್ಕಪ್ಪ, ಶಂಕರ್ ಅಶ್ವತ್, ಲಕ್ಷ್ಮೀ ಸಿದ್ಧಾರ್ಥ, ಸೌಮ್ಯ, ಚಂದನ್ ಎಂ. ಗೌಡ ಇದ್ದಾರೆ.

ಲಾಲು ತಿಮ್ಮಯ್ಯ ಎಂ.ಪಿ, ಪೂವಣ್ಣ, ಎಂ.ಟಿ, ರಶೀಂ ಸುಬ್ಬಯ್ಯ ಎಂ.ಬಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಚಿತ್ರದ ಕಥೆ ಚೋನಂದಕಿ ಚಿನ್ನಯ್ಯ, ಸಂಭಾಷಣೆ ರಾಘವೇಂದ್ರ ವಿ. ಪ್ರಮೋದ್‍ನಾದ್, ಛಾಯಾಗ್ರಹಣ ಉದಯಶಂಕರ್, ಸಂಗೀತ ಜುಬಿನ್ ಪೌಲ್, ಸಾಹಸ ಥ್ರಿಲ್ಲರ್ ಮಂಜು, ಸಂಕಲನ ಸುರೇಶ್‍ಅರಸ್, ಸಾಹಿತ್ಯ ರಾಘವೇಂದ್ರ ಬಿ. ಕೃಷ್ಣ, ನೃತ್ಯ ನರಸಿಂಹ, ಸಹ ನಿರ್ದೇಶನ ಸಂದೇಶ್, ತಾಂತ್ರಿಕ ನಿರ್ದೇಶನ ನಾರಾಯಣದಾಸ್ ಅವರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು