ಭಾನುವಾರ, ಜೂನ್ 26, 2022
27 °C

OTT ವಿರುದ್ಧ ಕಿಡಿಕಾರಿದ ನಟ ಜಾನ್‌ ಅಬ್ರಹಾಂ: ನಾನು ₹299, ₹499 ಪ್ಯಾಕ್‌ ನಟನಲ್ಲ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್‌ಆರ್‌ಆರ್‌, ಪುಷ್ಪ, ಕೆಜಿಎಫ್‌ನಂತಹ ಬಿಗ್ ಬಜೆಟ್ ಸಿನಿಮಾಗಳೇ ಬಿಡುಗಡೆಯಾಗಿ ಒಂದು ತಿಂಗಳು ಕಳೆಯುವುದರಲ್ಲಿ ಆನ್‌ಲೈನ್ ಸ್ಟ್ರಿಮಿಂಗ್ ವೇದಿಕೆಗಳಾದ ಒಟಿಟಿಗಳಿಗೆ ದಾಂಗುಡಿ ಇಡುತ್ತಿವೆ. ಇತ್ತೀಚೆಗಂತೂ ಒಟಿಟಿಗಳ ಜನಪ್ರಿಯತೆ ವ್ಯಾಪಕವಾಗಿ ಪಸರಿಸುತ್ತಿದೆ.

ಒಟಿಟಿಗಳ ಮೂಲಕ ಸಿನಿಮಾ ವೀಕ್ಷಣೆ ಮಾಡುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಈ ನಿಟ್ಟಿನಲ್ಲಿ ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಜಿ5. ಹಾಟ್‌ಸ್ಟಾರ್, ಸೋನಿ ಲಿವ್‌ನಂತಹ ಒಟಿಟಿ ವೇದಿಕೆಗಳಿಗೆ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದೆ.

ಘಟನಾನುಘಟಿ ನಾಯಕ ನಟರೇ ಒಟಿಟಿಗಳ ಮುಂದೆ ತಲೆಬಾಗಿದ್ದಾರೆ. ಆದರೆ, ಬಾಲಿವುಡ್ ನಟ ಜಾನ್‌ ಅಬ್ರಹಾಂ ಮಾತ್ರ ಒಟಿಟಿಗಳ ವಿರುದ್ಧ ಕಿಡಿಕಾರಿದ್ದಾರೆ.

ಎಕನಾಮಿಕ್ಸ್ ಟೈಮ್ಸ್ ಜೊತೆ ನಡೆದ ಸಂದರ್ಶನದಲ್ಲಿ ಮಾತನಾಡಿರುವ 49 ವರ್ಷದ ನಟ ಜಾನ್, ‘ನಾನು ಒಬ್ಬ ನಿರ್ಮಾಪಕನಾಗಿ ನನ್ನ ಕಂಟೆಂಟ್‌ಗಳನ್ನು ನಾನು ಸ್ಟ್ರೀಮಿಂಗ್ ಆ್ಯಪ್‌ನಲ್ಲಿ ಒದಗಿಸಬಹುದು ಎನ್ನುತ್ತೇನೆ. ಆದರೆ, ಒಬ್ಬ ನಟನಾಗಿ ನಾನು ಅವುಗಳನ್ನು ಇಷ್ಟಪಡುವುದಿಲ್ಲ’ ಎಂದಿದ್ದಾರೆ.

‘ಏಕೆಂದರೆ ನಾನು ಸಿನಿಮಾ ಮಂದಿರಗಳ ದೊಡ್ಡ ಪರದೆಯಲ್ಲಿ ಅಭಿಮಾನಿಗಳಿಗೆ ಸಿಗುವ ನಟನಾಗಲು ಬಯಸುತ್ತೇನೆ. ಕೇವಲ ₹299, ₹499 ಬೆಲೆಯ ಪ್ಯಾಕ್‌ಗಳಲ್ಲಿ ದೊರಕಲು ಇಷ್ಟಪಡುವುದಿಲ್ಲ’ ಎಂದು ಅಬ್ರಹಾಂ ಹೇಳಿದ್ದಾರೆ.

ಇತ್ತೀಚೆಗಷ್ಟೆ ಜಾನ್ ಅಬ್ರಹಾಂ ಅವರ ‘ಅಟ್ಯಾಕ್’ ಸಿನಿಮಾ ತೆರೆ ಕಂಡಿತ್ತು. ಆದರೆ, ಚಿತ್ರಮಂದಿರಗಳಲ್ಲಿ ಈ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿರಲಿಲ್ಲ. ಜಿ5 ನಲ್ಲಿ ತೆರೆಕಂಡು ಉತ್ತಮ ವೀಕ್ಷಣೆ ಕಂಡಿತ್ತು.

ಇನ್ನು ಜಾನ್ ಅಬ್ರಹಾಂ ಅವರು ಏಕ್ ವಿಲನ್ ರಿಟರ್ನ್ಸ್‌ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತಾರಾ ಸುತಾರಿಯಾ, ಅರ್ಜುನ್ ಕಪೂರ್, ಜಾನ್ ಜೊತೆ ಪ್ರಮುಖ ತಾರಾಗಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು