ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್ ಪ್ರಶಸ್ತಿ ಘೋಷಣೆ ವೇಳೆ ಬೆತ್ತಲೆಯಾದ WWE ಸ್ಟಾರ್ ಜಾನ್ ಸೀನಾ

Published 11 ಮಾರ್ಚ್ 2024, 11:18 IST
Last Updated 11 ಮಾರ್ಚ್ 2024, 11:18 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್‌: 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಬೆಸ್ಟ್ ಕಾಸ್ಟೂಮ್ ಡಿಸೈನರ್‘ ಪ್ರಶಸ್ತಿ ಘೋಷಣೆ ವೇಳೆ ನಟ, ಡಬ್ಲ್ಯೂಡಬ್ಲ್ಯೂಇ(WWE) ಸ್ಟಾರ್ ಜಾನ್ ಸೀನಾ ಬೆತ್ತಲೆಯಾಗಿ ವೇದಿಕೆಗೆ ಬಂದಿದ್ದಾರೆ. ಜಾನ್‌ ಸೀನಾ ಅವತಾರ ಕಂಡು ಗ್ಯಾಲರಿಯಲ್ಲಿ ಕುಳಿತಿದ್ದವರು ಅವಕ್ಕಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೇದಿಕೆಯ ಮೇಲೆ ಜನಪ್ರಿಯ ಟೆಲಿವಿಷನ್ ನಿರೂಪಕ ಜೇಮ್ಸ್ ಕಿಮ್ಮೆಲ್ ನಿಂತಿದ್ದು, ವೇದಿಕೆಯ ಒಂದು ಬದಿಯಿಂದ ಕಾರ್ಡ್‌ ಒಂದನ್ನು ಮುಚ್ಚಿಕೊಂಡು ಜಾನ್ ಸೀನಾ ಎಂಟ್ರಿ ಕೊಟ್ಟಿದ್ದಾರೆ. ಸ್ವಲ್ಪ ಸಮಯದ ನಂತರ ವೇದಿಕೆ ಮೇಲೆ ಕತ್ತಲು ಆವರಿಸಿದ್ದು, ಒಂದಿಷ್ಟು ಸಿಬ್ಬಂದಿ ವೇದಿಕೆಗೆ ಬಂದು ಜಾನ್‌ ಸೀನ ಅವರಿಗೆ ಬಟ್ಟೆ ತೊಡಿಸಿದ್ದಾರೆ. ನಂತರ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಜಾನ್‌ ಸೀನಾ ಹೊಸ ಅವತಾರ ಕಂಡು ನೆಟ್ಟಿಗರು ಗೊಂದಲಕ್ಕೀಡಾಗಿದ್ದು, ಇದು ನಿಜವೇ? ಎಂದು ಕೇಳಿದ್ದಾರೆ.

‘ಬೆಸ್ಟ್ ಕಾಸ್ಟೂಮ್ ಡಿಸೈನರ್’ ಪ್ರಶಸ್ತಿ ‘ಪೂರ್‌ ಥಿಂಗ್ಸ್‌’ ಚಿತ್ರ ಪಡೆದುಕೊಂಡಿದ್ದು, ವಸ್ತ್ರ ವಿನ್ಯಾಸಕಿ ಹಾಲಿ ವಾಡಿಗ್ಟನ್ ಅವರು ಪ್ರಶಸ್ತಿ ಪಡೆದಿದ್ದಾರೆ. ಉಳಿದಂತೆ ಹಾಲಿವುಡ್‌ನ ‘ಓಪನ್ ಹೈಮರ್’ ಮತ್ತು ‘ಪೂರ್‌ ಥಿಂಗ್ಸ್‌’ ಚಿತ್ರಗಳು ಹಲವು ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿವೆ. ನಟಿ ಎಮ್ಮಾ ಸ್ಟೋನ್ ಮತ್ತು ನಟ ಸಿನಿಯನ್ ಮರ್ಫಿ ಅತ್ಯುತ್ತಮ ನಟಿ ಮತ್ತು ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಾಧಕರ ಸ್ಮರಣೆ ವಿಭಾಗದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕ ನಿತಿನ್‌ ದೇಸಾಯಿ ಅವರ ಕೊಡುಗೆಯನ್ನು ಅಭಿನಂದಿಸಲಾಗಿದೆ.

ಸಮಾರಂಭದಲ್ಲಿ ಪಾಪ್ ಗಾಯಕಿ ಬಿಲ್ಲಿ ಐಲಿಶ್‌, ನಟಿಯರಾದ ಝೆಂಡೆಯಾ, ಮಾರ್ಗೋಟ್‌ ರೋಬಿ, ಲುಪಿತಾ ಮೈಯಾಂಗೊ, ಜನಿಫರ್ ಲಾರೆನ್ಸ್‌, ನಟ ರಾಬರ್ಟ್ ಡೌನಿ ಜೂನಿಯರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT