ಶನಿವಾರ, ಸೆಪ್ಟೆಂಬರ್ 26, 2020
23 °C

ಯುಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ ‘ಕಾಪ್ಪಾನ್‌’ ಟ್ರೇಲರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಲಿವುಡ್‌ ಮತ್ತು ಕಾಲಿವುಡ್‌ನಲ್ಲಿ ಕುತೂಹಲ ಹುಟ್ಟಿಸಿರುವ ಚಿತ್ರ ‘ಕಾಪ್ಪಾನ್‌’ ಇದೇ 20ರಂದು ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ. 

ಬುಧವಾರ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಕೋಟ್ಯಾಂತರ ಅಭಿಮಾನಿಗಳು ವೀಕ್ಷಿಸಿದ್ದಾರೆ. ಅಲ್ಲದೆ ಯೂಟ್ಯೂಬ್‌ನಲ್ಲಿ ‘ಕಾಪ್ಪಾನ್‌’ ಟ್ರೆಂಡ್ ಸೃಷ್ಟಿಸಿದೆ. 

ಪೊಲಿಟಿಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಆಗಿದ್ದ ‘ಲೂಸಿಫರ್‌’ನಲ್ಲಿ ತಣ್ಣಗಿನ ಕ್ರೌರ್ಯದೊಂದಿಗೆ ಅಬ್ಬರಿಸಿದ್ದ ಮೋಹನ್‌ಲಾಲ್‌ ಮತ್ತೊಮ್ಮೆ ಅಂತಹುದೇ ಚಿತ್ರಕತೆಯುಳ್ಳ ‘ಕಾಪ್ಪಾನ್‌’ನಲ್ಲಿ ಪ್ರಧಾನ ಪಾತ್ರದಲ್ಲಿ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ತಮಿಳಿನ ಅಗ್ರನಟ ಸೂರ್ಯನ ಸ್ಟೈಲಿಶ್‌ ಲುಕ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ.

ಕೆ.ವಿ.ಆನಂದ್‌ ನಿರ್ದೇಶನ ಈ ಚಿತ್ರದಲ್ಲಿ ನಾಯಕಿಯಾಗಿ ಸಯೇಶಾ ಸೈಗಲ್ ಕಾಣಿಸಿಕೊಂಡಿದ್ದಾರೆ. 

ಹ್ಯಾರೀಸ್‌ ಜಯರಾಜ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. 

ಏಪ್ರಿಲ್‌ನಲ್ಲಿ ಟೀಸರ್‌ ಬಿಡುಗಡೆ ಮಾಡಿದ್ದ ಚಿತ್ರ ತಂಡ ವೀಕ್ಷಕರಲ್ಲಿ ಕುತೂಹಲ ಕೆರಳಿಸಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು