ಬುಧವಾರ, ಸೆಪ್ಟೆಂಬರ್ 18, 2019
25 °C

ಜಾನ್‌ ಅಬ್ರಹಾಂ ಜತೆ ಕಾಜಲ್‌ ಅಗರ್‌ವಾಲ್‌

Published:
Updated:
Prajavani

ಇತ್ತೀಚೆಗೆ ನಟಿ ಕಾಜಲ್‌ ಅಗರ್‌ವಾಲ್‌ ಒಂದರ ಹಿಂದೆ ಒಂದರಂತೆ ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಜಾನ್‌ ಅಬ್ರಹಾಂ ಅವರ ‘ಮುಂಬೈ ಸಾಗಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. 

ನಟ ಸೂರ್ಯ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಇತ್ತೀಚೆಗೆ ಕಾಜಲ್‌ ಸಹಿ ಹಾಕಿದ್ದರು. ಅದರ ಬೆನ್ನಲ್ಲೇ ಜಾನ್‌ ಅಬ್ರಹಾಂ ಅವರ ಚಿತ್ರಕ್ಕೂ ಸಹಿ ಹಾಕಿದ್ದಾರೆ. 

ಈ ವಿಷಯವನ್ನು ಸ್ವತಃ ಕಾಜಲ್‌ ಸ್ಪಷ್ಟಪಡಿಸಿದ್ದಾರೆ. 

‘ಇದರಲ್ಲಿ ನಾಯಕಿ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ನಾನು ಕಾಜಲ್‌ ಅಭಿನಯದ ಸಿನಿಮಾಗಳನ್ನು ನೋಡಿದ್ದೇನೆ. ಅವರ ನಟನೆ ಅದ್ಭುತ. ಈ ಚಿತ್ರದಲ್ಲಿ ಅವರು ನಾಯಕಿಯಾಗಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಚಿತ್ರದ ನಿರ್ದೇಶಕ ಸಂಜಯ್‌ ಗುಪ್ತಾ ತಿಳಿಸಿದ್ದಾರೆ. 

‘ಮುಂಬೈ ಸಾಗಾ’ ಚಿತ್ರವು 80ರಿಂದ 90ದಶಕದಲ್ಲಿ ನಡೆಯುವ ಕಥಾವಸ್ತುವನ್ನು ಹೊಂದಿದೆ. ಇದರಲ್ಲಿ ನಟ ಇಮ್ರಾನ್‌ ಹಶ್ಮಿ, ಜಾಕಿ ಶ್ರಾಫ್‌, ಸುನಿಲ್‌ ಶೆಟ್ಟಿ, ಗುಲ್ಶನ್‌ ಗ್ರೋವರ್‌ ಹಾಗೂ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ನಟಿ ಅಂಜನಾ ಈ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಲಿದ್ದಾರೆ. 

 

Post Comments (+)