ಭಾರತೀಯ ಚಿತ್ರರಂಗದ ಅದ್ಬುತ ಸಿನಿಮಾಗಳಲ್ಲೊಂದು ನಾಯಗನ್. ಕಮಲ್ ಹಾಸನ್–ಮಣಿರತ್ನಂ ಜೋಡಿ 1987ರಲ್ಲಿ ಈ ಸಿನಿಮಾದೊಂದಿಗೆ ಇತಿಹಾಸವನ್ನೇ ಸೃಷ್ಟಿಸಿತ್ತು. ಈ ಜೋಡಿಯಿಂದ ಮತ್ತೊಂದು ಹೊಸ ಸಿನಿಮಾ ಘೋಷಣೆಯಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಮಲ್‌ಹಾಸನ್, ತಮ್ಮ ಮುಂದಿನ ಸಿನಿಮಾ ಚಿತ್ರರಂಗದ ಮಾಸ್ಟರ್ ಮಣಿರತ್ನಂ ಅವರ ಜೊತೆಗೆ ಎಂದಿದ್ದಾರೆ. ಮಂಗಳವಾರ 68ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಕಮಲ್‌ಹಾಸನ್, ಇದರೊಂದಿಗೆ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ.
‘ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. #ಕೆಎಚ್234’ ಎಂದು ಕಮಲ್ ಹಾಸನ್ ಹೊಸ ಸಿನಿಮಾದ ಟೀಸರ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.
ಉದಯ್‌ನಿಧಿ ಸ್ಟಾಲಿನ್ ಅವರ ರೆಡ್‌ಗೈಂಟ್ ಮೂವೀಸ್ ಮತ್ತು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲಂಸ್ ಒಟ್ಟಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.ಪೊನ್ನಿಯಿನ್ ಸೆಲ್ವನ್–1 ಯಶಸ್ಸಿನಲ್ಲಿ ಮಣಿರತ್ನಂ ಇದ್ದಾರೆ. ಕಮಲ್ ಹಾಸನ್ ವಿಕ್ರಂ ಸಿನಿಮಾದ ಗೆಲುವಿನ ಅಲೆಯಲ್ಲಿದ್ದಾರೆ. ಜನ ಇಂದಿಗೂ ಇವರಿಬ್ಬರ ‘ನಾಯಗನ್’ ಎಂಬ ಆಕ್ಷನ್ ಮಾಸ್ ಸಿನಿಮಾ ನೆನಪಿಟ್ಟುಕೊಂಡಿದ್ದಾರೆ. ಹೀಗಾಗಿ ಹೊಸ ಸಿನಿಮಾದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
ಎ.ಆರ್.ರೆಹಮಾನ್ ಸಂಗೀತ ಚಿತ್ರಕ್ಕಿದೆ. ಸದ್ಯ ಕಮಲ್ ಹಾಸನ್ ಶಂಕರ್ ನಿರ್ದೇಶನದ ಇಂಡಿಯನ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.