ಸೋಮವಾರ, ಆಗಸ್ಟ್ 15, 2022
22 °C

ಚುನಾವಣೆಗೂ ಮೊದಲು ‘ಇಂಡಿಯನ್‌ 2’ ಶೂಟಿಂಗ್‌ ಮುಗಿಸುವ ತವಕದಲ್ಲಿ ಕಮಲ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಇಂಡಿಯನ್‌’ ಸಿನಿಮಾ ಎರಡು ದಶಕಗಳ ಹಿಂದೆ ಬಿಡುಗಡೆಯಾಗಿತ್ತು. ಅಲ್ಲದೇ ಈ ಸಿನಿಮಾ ನಿರ್ದೇಶಕ ಶಂಕರ್‌ಗೆ ದಕ್ಷಿಣ ಭಾರತದ ಯಶಸ್ವಿ ನಿರ್ದೇಶಕ ಎಂಬ ಪಟ್ಟವನ್ನು ಮುಡಿಗೇರಿಸುವಂತೆ ಮಾಡಿತ್ತು. ನಟ ಕಮಲ್ ಹಾಸನ್ ಅವರ ಅದ್ಭುತ ನಟನೆಯಿಂದ ಸಿನಿಮಾ ಈಗಲೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಅದ್ಭುತ ಚಿತ್ರಕತೆ, ಸುಮಧುರ ಸಂಗೀತ ಹಾಗೂ ಇತರ ಕೆಲಸಗಳೂ ಸೇರಿ ಸಿನಿಮಾ ದಿ ಬೆಸ್ಟ್ ಎನ್ನಿಸಿಕೊಂಡಿತ್ತು.

ಶಂಕರ್ ‘ಇಂಡಿಯನ್’ ಸಿನಿಮಾದ ಸೀಕ್ವೆಲ್ ಮಾಡುತ್ತಿದ್ದಾರೆ. ಅಲ್ಲದೇ ‘ಇಂಡಿಯನ್ 2’ ಸಿನಿಮಾಗೆ ಬಹಳ ದಿನಗಳ ಹಿಂದಿನಿಂದಲೇ ಕೆಲಸ ಮಾಡಲು ಆರಂಭಿಸಿದ್ದಾರೆ. ಲಾಕ್‌ಡೌನ್‌ಗೂ ಮೊದಲು ಸಿನಿಮಾದ ಶೂಟಿಂಗ್‌ ಕೂಡ ಭಾಗಶಃ ಪೂರ್ಣಗೊಂಡಿತ್ತು. ಅದಕ್ಕೂ ಮೊದಲು ಸಿನಿಮಾ ಸೆಟ್‌ನಲ್ಲಿ ನಡೆದ ಕೆಲವು ಆಕಸ್ಮಿಕ ಘಟನೆಗಳು ಹಾಗೂ ಇತರ ಕಾರಣಗಳಿಂದ ಸಿನಿಮಾ ಶೂಟಿಂಗ್ ತಡವಾಗಿತ್ತು.

2021ರ ಮಧ್ಯ ಭಾಗದಲ್ಲಿ ತಮಿಳುನಾಡು ಚುನಾವಣೆ ನಡೆಯಲಿದೆ. ಆ ಕಾರಣಕ್ಕೆ 2021ರ ಜನವರಿ ಒಳಗೆ ತಾವು ನಟಿಸಬೇಕಿರುವ ಸಿನಿಮಾದ ಸಂಪೂರ್ಣ ಭಾಗವನ್ನು ಮುಗಿಸುವ ಯೋಚನೆಯಲ್ಲಿದ್ದಾರಂತೆ ಕಮಲ್‌. ಅದನ್ನು ನಿರ್ದೇಶಕ ಶಂಕರ್‌ ಅವರಿಗೂ ತಿಳಿಸಿದ್ದಾರಂತೆ‌. ಆ ಕಾರಣಕ್ಕೆ ಸಿನಿತಂಡ ಕೂಡ ಕಮಲ್‌ ಶೆಡ್ಯೂಲ್‌ ಆಧಾರದ ಮೇಲೆ ಕೆಲಸ ಮಾಡುತ್ತಿದೆಯಂತೆ. ಫೆಬ್ರುವರಿ, ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಮೂರು ತಿಂಗಳು ಸಂಪೂರ್ಣವಾಗಿ ಚುನವಣಾ ಕಾರ್ಯದಲ್ಲಿ ಕಮಲ್‌ ತೊಡಗಲಿದ್ದಾರೆ ಎಂಬ ಮಾಹಿತಿಯನ್ನು ಹೊರ ಹಾಕಿವೆ ಮೂಲಗಳು.

ಶಂಕರ್ ಶೂಟಿಂಗ್‌ಗಿಂತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಆ ಕಾರಣಕ್ಕೆ ಇಂಡಿಯನ್ 2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಬಹಳ ದಿನಗಳು ಹಿಡಿಯಬಹುದು. ಈ ಸಿನಿಮಾವೂ 2021ರಲ್ಲಿ ತೆರೆ ಕಾಣುವುದು ಅನುಮಾನವಾಗಿದೆ. ಈ ಸಿನಿಮಾದಲ್ಲಿ ಕಾಜಲ್‌ ಹಾಗೂ ರಕುಲ್‌ ಪ್ರೀತ್‌ ನಾಯಕಿಯರಾಗಿ ನಟಿಸುತ್ತಿದ್ದಾರೆ. ಅನಿರುದ್ಧ್‌ ಸಂಗೀತ ನಿರ್ದೇಶನವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು