ಮುಂದಿನ ವಾರ ‘ಕಾಂಚನ 3’ ತೆರೆಗೆ

ಶುಕ್ರವಾರ, ಏಪ್ರಿಲ್ 19, 2019
22 °C

ಮುಂದಿನ ವಾರ ‘ಕಾಂಚನ 3’ ತೆರೆಗೆ

Published:
Updated:
Prajavani

ತೆಲುಗಿನ ‘ಕಾಂಚನ 3’ ಚಿತ್ರ ಮುಂದಿನ ಶುಕ್ರವಾರ ತೆರೆಗೆ ಬರಲಿದೆ. ತಮ್ಮ ಕಲ್ಪನಾ ಲಹರಿಗಳನ್ನು ಕ್ಯಾಮೆರಾ ಕಣ್ಣಿನ ಮೂಲಕ ವಾಸ್ತವಕ್ಕೆ ತರುವಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ನಿರ್ದೇಶಕ ರಾಘವ ಲಾರೆನ್ಸ್‌ ಅವರ ನಿರ್ದೇಶನದ ಚಿತ್ರವಿದು.

ನೃತ್ಯ ನಿರ್ದೇಶನದಿಂದ ಚಿತ್ರ ನಿರ್ದೇಶನಕ್ಕೆ ಇಳಿದ ಲಾರೆನ್ಸ್‌ ಮಾಡಿದ ಚಿತ್ರಗಳೆಲ್ಲವೂ ಸೂಪರ್‌ ಹಿಟ್‌ ಆಗಿರುವುದು ಗಮನಾರ್ಹ. ಅವರ ‘ಕಾಂಚನ’ ಸರಣಿಯ ಮೂರನೇ ಚಿತ್ರ ಇದಾಗಿದೆ. ಸೆನ್ಸಾರ್‌ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್‌ ದೊರಕಿರುವ ಕಾರಣ ಏ.19ರಂದು ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ.

‘ಕಾಂಚನ 3’ ಹಾರರ್ ಕಾಮಿಡಿ. ಚಿತ್ರಕ್ಕೆ ಬಂಡವಾಳ ಹೂಡಿರುವುದು ರಾಘವೇಂದ್ರ ಪ್ರೊಡಕ್ಷನ್ಸ್‌ ಬ್ಯಾನರ್‌ ಮತ್ತು ಲೈಟ್‌ಹೌಸ್ ಮೂವಿ ಮೇಕರ್ಸ್‌. ಒವಿಯಾ, ವೇದಿಕಾ, ಕೋವಿ ಸರಳ, ಕಬೀರ್‌ ದುಲ್ಹನ್‌ ಸಿಂಗ್‌, ದೇವದರ್ಶಿನಿ, ಸತ್ಯರಾಜ್‌, ಕಿಶೋರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವೆಟ್ರಿ, ಸರ್ವೇಶ್‌ ಮತ್ತು ಮುರಾರಿ ಅವರ ನಿರ್ದೇಶನದಲ್ಲಿ ನೃತ್ಯಗಳು ಚೆನ್ನಾಗಿ ಮೂಡಿಬಂದಿವೆ ಎನ್ನಲಾಗಿದೆ. 

ಸರಣಿಯ ಈ ಹಿಂದಿನ ಎರಡು ಚಿತ್ರಗಳೂ ಪ್ರೇಕ್ಷಕರ ಪ್ರತಿಕ್ರಿಯೆ, ವಿಮರ್ಶೆ ಮತ್ತು ಗಳಿಕೆಯಿಂದ ಮನೆ ಮಾತಾಗಿತ್ತು. ಹಾಗಾಗಿ ಮೂರನೇ ಭಾಗವನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !