ಶನಿವಾರ, ಅಕ್ಟೋಬರ್ 31, 2020
28 °C

ಬಾಲಿವುಡ್‌ ಅಲ್ಲ ಬುಲ್ಲಿವುಡ್: ಕಂಗನಾ ರನೌತ್ ಟ್ವೀಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ಪಾಯಲ್ ಘೋಷ್‌ ಹಾಗೂ ನಿರ್ದೇಶಕ, ನಟ ಅನುರಾಗ್ ಕಶ್ಯಪ್ ಅವರ ಹೊಸ ವಿವಾದ ಬಾಲಿವುಡ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

‘ನಿರ್ದೇಶಕ ಅನುರಾಗ್ ನನ್ನ ಎದುರು ಬೆತ್ತಲಾಗಿದ್ದಲ್ಲದೇ ನನಗೆ ಅವರನ್ನು ಅನುಕರಿಸಲು ಹೇಳಿದ್ದರು’ ಎಂದು ಅನುರಾಗ್ ಮೇಲೆ ಗಂಭೀರ ಆರೋಪ ಹೊರಿಸಿದ್ದರು ನಟಿ ಪಾಯಲ್‌. ಬಿ ಟೌನ್‌ನಲ್ಲಿ ಈಗ ಇದೇ ಸುದ್ದಿ. 

ಪಾಯಲ್ ಪರ ನಿಂತಿರುವ ನಟಿ ಕಂಗನಾ ನಿರ್ದೇಶಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅನುರಾಗ್ ಕಶ್ಯಪ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಕಂಗನಾ.

ಅಲ್ಲದೇ ಬಾಲಿವುಡ್‌ ಅನ್ನು ‘ಬುಲ್ಲಿವುಡ್‌’ ಎಂದು ಕರೆದಿದ್ದಾರೆ. ಚಿತ್ರರಂಗಕ್ಕೆ ಹೊರಗಿನಿಂದ ಬಂದು ಅವಕಾಶ ಗಿಟ್ಟಿಸಿಕೊಳ್ಳಲು ಹೋರಾಡುವ ಹೆಣ್ಣುಮಕ್ಕಳನ್ನು ಲೈಂಗಿಕ ಕಾರ್ಯಕರ್ತೆಯರಂತೆ ನೋಡುತ್ತಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

 

 

 

‘ನನಗೆ ತಿಳಿದಿರುವಂತೆ ಅನುರಾಗ್ ಎರಡೆರಡು ಮದುವೆಯಾದರೂ ಕೂಡ ಹೆಂಡತಿಯರೊಂದಿಗೆ ನ್ಯಾಯವಾಗಿ ಇರಲಿಲ್ಲ. ಪಾಯಲ್‌ಗೆ ಅನುರಾಗ್ ಏನು ಮಾಡಿದ್ದಾರೆ ಅದು ಬಾಲಿವುಡ್‌ನಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಹೊರಗಿನಿಂದ ಬಂದು ಅವಕಾಶಕ್ಕೆ ಹೆಣಗಾಡುವ ಹೆಣ್ಣುಮಕ್ಕಳನ್ನು ಲೈಂಗಿಕ ಕಾರ್ಯಕರ್ತೆಯರಂತೆ ನೋಡುವುದು ಬಾಲಿವುಡ್‌ನಲ್ಲಿ ಬೆಳೆದು ಬಂದಿದೆ’ ಎಂದು ಟ್ವೀಟ್‌ ಮಾಡಿರುವ ಕಂಗನಾ ಪಾಯಲ್ ಹಾಗೂ ಅನುರಾಗ್ ಅವರನ್ನು ಟ್ಯಾಗ್ ಮಾಡಿದ್ದಾರೆ.

 

ಪ್ಯಾಂಟಮ್‌ ಪ್ರೊಡಕ್ಷನ್ ಹೌಸ್ ಅವರನ್ನು ಸಹ ಪ್ರಸ್ತಾಪಿಸಿರುವ ಕಂಗನಾ ಈ ಪ್ರೊಡಕ್ಷನ್ ಹೌಸ್‌ನ ಕೆಲವರು ಮೀಟೂ ಆರೋಪಕ್ಕೆ ಗುರಿಯಾಗಿದ್ದರು. ಆದರೆ ಅವರನ್ನು ಅವರಿಂದ ತಪ್ಪಿಸಿ ಬಿಡಲಾಯಿತು ಎಂದಿದ್ದಲ್ಲದೇ ಅನುರಾಗ್ ಮೇಲೆ ಪಾಯಲ್ ಮಾಡಿರುವ ಆರೋಪಗಳು ಸಮರ್ಥವಾಗಿವೆ ಎಂದಿದ್ದಾರೆ.

ಪಾಯಲ್ ಟ್ವೀಟ್‌ಗೆ ಉತ್ತರಿಸಿದ್ದ ಕಂಗನಾ ಈಗ ಅನುರಾಗ್ ಪಾಯಲ್‌ಗೆ ಮಾಡಿರುವಂತೆ ಅನೇಕ ಸ್ಟಾರ್‌ ನಟರು ನಟಿಯರಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು