ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಬಾಳ ಸಂಗಾತಿಯ ಬಗ್ಗೆ ಶೀಘ್ರದಲ್ಲೇ ನಿಮಗೆ ತಿಳಿಯಲಿದೆ: ಕಂಗನಾ

Last Updated 11 ನವೆಂಬರ್ 2021, 8:50 IST
ಅಕ್ಷರ ಗಾತ್ರ

ನವದೆಹಲಿ: ನನ್ನ ಬಾಳ ಸಂಗಾತಿಯ ಕುರಿತು ಶೀಘ್ರದಲ್ಲೇ ನಿಮಗೆ ತಿಳಿಯಲಿದೆ ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಬಾಲಿವುಡ್‌ ತಾರೆ ಕಂಗನಾ ರನೌಟ್‌ ಹೇಳಿದ್ದಾರೆ.

ಪ್ರದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ನಂತರ ಬುಧವಾರ ಸುದ್ದಿವಾಹಿನಿ ‘ಟೈಮ್ಸ್‌ ನೌ‘ಗೆ ಸಂದರ್ಶನ ನೀಡಿರುವ ಅವರು ತಮ್ಮ ಕೌಟುಂಬಿಕ ಜೀವನದ ಕುರಿತು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮದುವೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಂಗನಾ, ‘ಮುಂದಿನ ಐದು ವರ್ಷಗಳಲ್ಲಿ ಮದುವೆಯಾಗಿ ಮಕ್ಕಳನ್ನು ಹೊಂದಲು ಬಯಸುತ್ತೇನೆ. ನಾನೀಗ ವೈಯಕ್ತಿಕವಾಗಿ ಸಂತೋಷವಾಗಿದ್ದೇನೆ. ಬಾಳ ಸಂಗಾತಿಯ ಬಗೆಗಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಿದ್ದೇನೆ‘ ಎಂದು ಹೇಳಿದ್ದಾರೆ

‘ನಾನು ಖಂಡಿತವಾಗಿಯೂ ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಬಯಸುತ್ತೇನೆ. ನಾನು ಐದು ವರ್ಷಗಳ ನಂತರ ತಾಯಿಯಾಗಿ ಮತ್ತು ಹೆಂಡತಿಯಾಗಿ ಜೀವನ ನಡೆಸಲಿದ್ದೇನೆ‘ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT