ಗುರುವಾರ , ಸೆಪ್ಟೆಂಬರ್ 23, 2021
20 °C

ತೆಳು ಉಡುಗೆಯಲ್ಲಿ ಬಿಸಿ ಏರಿಸಿದ ಕಂಗನಾ ರನೌತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಇತ್ತೀಚಿನ ದಿನಗಳಲ್ಲಿ ಹೆಚ್ಚು ವಿವಾದಗಳ ಮೂಲಕವೇ ಸುದ್ದಿಯಾಗುತ್ತಿರುವ ಬಾಲಿವುಡ್‌ನ ಖ್ಯಾತ ನಟಿ ಕಂಗನಾ ರನೌತ್ ಅವರು ಇದೀಗ ವೀಕೆಂಡ್‌ ಮೋಜಿನಲ್ಲಿ ಹಾಟ್ ಉಡುಪುಗಳನ್ನು ತೊಟ್ಟು ಇನ್‌ಸ್ಟಾಗ್ರಾಮ್‌ನಲ್ಲಿ ಬಿಸಿ ಏರಿಸಿದ್ದಾರೆ.

ಬಿಳಿ ಬಣ್ಣದ ತೆಳುವಾದ ಮೇಲುಡುಗೆ ತೊಟ್ಟಿರುವ ಕಂಗನಾ, ಚಿನ್ನದ ಗುಂಡಿಗಳನ್ನು ಹೊಂದಿರುವ ಬಿಳಿ ಪ್ಯಾಂಟ್ ಮೂಲಕ ಆಕರ್ಷಕವಾಗಿ ಕಾಣುತ್ತಿದ್ದಾರೆ. ಇದರ ಜೊತೆಗೆ ಆಕರ್ಷಕ ಗಂಟುಗಳಿಂದ ಕೂಡಿದ ಹೇರ್ ಸ್ಟೈಲ್ ಮತ್ತು ಬಂಗಾರದ ನೆಕ್ಲೆಸ್, ಕಂಗನಾ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿದೆ. ಪಡ್ಡೆಗಳ ಜೊತೆಗೆ ಫ್ಯಾಶನ್ ಪ್ರಿಯರಿಗೂ ಕಂಗನಾಳ ನ್ಯೂ ಲುಕ್ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಸನ್ ಬಾತ್‌ಗೆ ಬಂದ ಬಾಲಿವುಡ್‌ನ ಸೌಂದರ್ಯದ ಖನಿಯನ್ನು ಕಣ್ತುಂಬಿಸಿಕೊಳ್ಳಲು ಸೂರ್ಯನೇ ಇಣುಕಿದಂತೆ ಗೋಚರಿಸುತ್ತಿದೆ.

ಇದನ್ನೂ ಓದಿ.. ರಾಜಕೀಯಕ್ಕೆ ಬರುತ್ತೇನೆ.. ಸದ್ಯದಲ್ಲೇ ‘ಶುಗರ್ ಡ್ಯಾಡಿ’ ಪುಸ್ತಕ ಬಿಡುಗಡೆ: ಸಂಬರಗಿ

ಮತ್ತೊಂದು ಚಿತ್ರದಲ್ಲಿ ತೆಳುವಾದ ಪಟ್ಟಿಯ ಹಸಿರು ಉಡುಗೆಯನ್ನು ಧರಿಸಿರುವ ಕಂಗನಾ, ಪಚ್ಚೆಯ ಹರಳಿನ ವಜ್ರದ ನೆಕ್ಲೆಸ್ ತೊಟ್ಟಿದ್ಧರೆ. ಗುಲಾಬಿ ವರ್ಣದ ಆಕರ್ಷಪ ಗುಂಗುರು ಕೂದಲಿನ ಹೇರ್ ಸ್ಟೈಲ್ ಮನಮೋಹಕವಾಗಿದೆ.

ಇದರ ಜೊತೆಗೆ, ಇನ್ನೊಂದು ಪಟದಲ್ಲಿ ಬೀಜ್ ಫ್ಲೋರಲ್ ಪ್ರಿಂಟೆಡ್ ರೋಂಪರ್ ಮತ್ತು ಸನ್ ಗ್ಲಾಸ್ ಧರಿಸಿರುವ ಕಂಗನಾ, ಕೈಯಲ್ಲಿ ಹಿಡಿದಿರುವ ಬಹುವರ್ಣದ ಹೂವಿನ ಗೊಂಚಲುಗಿಂತಲೂ ಸುಂದರವಾಗಿ ಕಾಣುತ್ತಿದ್ದಾರೆ.

ಇದನ್ನೂ ಓದಿ.. ಮದುವೆ ಪ್ಲಾನ್ ಬಹಿರಂಗಪಡಿಸಿದ ಮಂಜು ಪಾವಗಡ: ಊಹಾಪೋಹಗಳಿಗೆ ತೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು