ಶನಿವಾರ, ಮೇ 21, 2022
19 °C

ನಟ ಪ್ರಜ್ವಲ್‌ ದೇವರಾಜ್‌ ದಂಪತಿಗೆ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್ ದೇವರಾಜ್‌ ಹಾಗೂ ಅವರ ಪತ್ನಿ ರಾಗಿಣಿ ಅವರಿಗೆ ಕೋವಿಡ್‌–19 ದೃಢಪಟ್ಟಿದೆ.

ಈ ಕುರಿತು ಟ್ವಿಟರ್‌ನಲ್ಲಿ ಪ್ರಜ್ವಲ್‌ ದೇವರಾಜ್‌ ಮಾಹಿತಿ ನೀಡಿದ್ದು, ‘ರಾಗಿಣಿ ಹಾಗೂ ನನಗೆ ಕೋವಿಡ್‌ ಪಾಸಿಟಿವ್‌ ಆಗಿದೆ. ವೈದ್ಯರು ತಿಳಿಸಿದ ಔಷಧಗಳನ್ನು ನಾವು ತೆಗೆದುಕೊಳ್ಳುತ್ತಿದ್ದು, ವಿಶ್ರಾಂತಿ ಪಡೆಯುತ್ತಿದ್ದೇವೆ. ಒಂದಾಗಿಯೇ ಸೋಂಕಿನಿಂದ ಗುಣಮುಖವಾಗಿ ಹೊರಬರುತ್ತೇವೆ. ನೀವೂ ನಿಮ್ಮ ರಕ್ಷಣೆಯಲ್ಲಿರಿ. ಸುರಕ್ಷಿತವಾಗಿರಿ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು’ ಎಂದು ಉಲ್ಲೇಖಿಸಿದ್ದಾರೆ.

ಇತ್ತೀಚೆಗಷ್ಟೇ ಪ್ರಜ್ವಲ್‌ ದೇವರಾಜ್‌ ಅಭಿನಯದ ಇನ್‌ಸ್ಪೆಕ್ಟರ್‌ ವಿಕ್ರಂ ತೆರೆಕಂಡಿತ್ತು. ಇದರ ಪ್ರಚಾರಕ್ಕೂ ಅವರು ಹಲವೆಡೆ ಸುತ್ತಿದ್ದರು. ಜೊತೆಗೆ ಇವರ ಮುಂದಿನ ಚಿತ್ರ ಅರ್ಜುನ್‌ ಗೌಡ ಕೂಡಾ ತೆರೆಯ ಮೇಲೆ ಬರಲು ಸಿದ್ಧವಾಗಿದ್ದು, ಏ.10ರಂದು ಇದರ ಟ್ರೇಲರ್‌ ಬಿಡುಗಡೆಯಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು