ಬೆಂಗಳೂರು: ನಟ ಹೀರೊ ಶಿವರಾಜ್ಕುಮಾರ್ ಮನೆಯ 'ನೀಮೋ' ಹೆಸರಿನ ಶ್ವಾನ ನಿಧನವಾಗಿದೆ. ಈ ಕುರಿತು ಗೀತಾ ಶಿವರಾಜ್ಕುಮಾರ್ ಭಾವನಾತ್ಮಕ ಪತ್ರ ಬರೆದಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುವ ಮುನ್ನ ಕಳೆದೊಂದು ತಿಂಗಳಿಂದ ಶಿವರಾಜ್ಕುಮಾರ್ ಅವರಿಗೆ ತಾಗಿಕೊಂಡೇ ನೀಮೋ ಮಲಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗೋವಾಗ ನಮ್ಮ ನೋವನ್ನೂ ಅವರ ಜೊತೆಯಲ್ಲಿ ತಗೆದುಕೊಂಡು ಹೋಗ್ತಾವಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತಗೊಂಡಿದ್ದಾನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಗೀತಾ ಶಿವಕುಮಾರ್ ಭಾವನಾತ್ಮಕ ಪತ್ರ ಹೀಗಿದೆ...

ನಮ್ಮ ಮನೆಯಲ್ಲಿ ನಾವು ಐದಲ್ಲಾ, ಆರು ಜನ. ಶಿವಣ್ಣ, ಗೀತಾ, ನಿಶು, ನಿವಿ, ದಿಲೀಪ್ ಮತ್ತು ನನ್ನ ಮರಿ ನೀಮೋ.

ನಿಶು ಹುಟ್ಟುಹಬ್ಬಕ್ಕೆ ದಿಲೀಪ್ ಅವರು ಮದುವೆಗೆ ಮುಂಚೆ ನೀಮೋನನ್ನು ಗಿಫ್ಟಾಗಿ ತಂದರು. ನಿಶು ಡಾಕ್ಟರ್ ಆಗಿದ್ದರಿಂದ ಅವಳಿಗೆ ನೀಮೋನನ್ನು ನೋಡಿಕೊಳ್ಳಲು ಸಮಯ ಆಗೋದಿಲ್ಲ ಎಂದು ನಮ್ಮ ಮನೆಗೆ ತಂದ್ವಿ! ಹೀಗೆ ಅವನು ನಮ್ಮ ಮನೆಯಲ್ಲಿ ಆರೆನೆಯವನಾದ. Thanks Dileep for bringing him to our life.

ಎಲ್ಲರೂ ಅವರ ಪೆಟ್ ಹಿಂದೆ ಓಡಾಡ್ತಾ ಇರ್ತಾರೆ. ಆದ್ರೆ ನೀಮೋ ಯಾವಾಗ್ಲೂ ನನ್ನ ಹಿಂದೆ. ನಾನು ಕಿಚನ್ನಲ್ಲಿ ಇರುವಾಗ ಅಥವಾ ಮನೆಯಲ್ಲಿ ಎಲ್ಲೇ ಹೋದ್ರೂ ಅವನು ಯಾವಾಗಲೂ ನನ್ನ ಹಿಂದೆ. ನನ್ನ ಕೆಲಸ ಮುಗಿಯುವುದು ಎಷ್ಟೇ ಹೊತ್ತಾದರೂ ಅವನು ಮಾತ್ರ ನನ್ನ ಹಿಂದೆ. ಶಿವಣ್ಣ ಅವರ ಕಾಲ ಬಳಿ ಅಂಟಿಕೊಂಡು, ಆ್ಯಂಗಲ್ ಅಜಸ್ಟ್ ಮಾಡಿಕೊಂಡು, ನನ್ನ ಮುಖ ಕಾಣೋ ಹಾಗೆ ಕೂರ್ತಿದ್ದ ನೀಮೋ.

ನೀಮೋ ನನ್ನ ಜೀವನದ ಭಾಗ. ನೀಮೋ, ಗೀತಾ ಇಬ್ಬರಲ್ಲ, ನಾವಿಬ್ಬರೂ ಒಂದೇ. ಅವನು ಬೆಳೆಯುವಾಗ ಅವನು ಎಷ್ಟೇ ದೊಡ್ಡವನಾದ್ರು ಮಗುವಿನಂತೆ ಆರೈಕೆ ಮಾಡಿ, ಅವನ ಊಟ, ತಿಂಡಿ, ಅವನಿಗೆ ಜ್ವರ ಬಂದರೆ ತಕ್ಷಣ ಟ್ರೀಟ್ಮೆಂಟ್, ಅದಾದ ಮೇಲೆ ಅವನಿಗೆ ಕರೆಕ್ಟ್ ಟೈಮಿಗೆ ಮೆಡಿಸಿನ್ ಹೀಗೆ ತುಂಬಾ ಕಾಳಜಿಯಿಂದ ನೋಡಿಕೊಂಡಿದ್ದು ನಿವಿ. ಈಗ ಈ ಮರಿ ನಮ್ಮನ್ನೆಲ್ಲಾ ಬಿಟ್ಟು ದೇವರ ಹತ್ತಿರ ಹೋದ. ನನ್ನ ಮರಿ ನಾನು ಅಮೆರಿಕಗೆ ಬಂದ ಮೇಲೆ ನನ್ನನ್ನು ಬಿಟ್ಟು ಹೋದ. ಅವನ ನಿಸ್ವಾರ್ಥ ಪ್ರೀತಿ ಯಾರಿಂದಲೂ ತುಂಬಲು ಸಾಧ್ಯವಾಗೋಲ್ಲ. ನಾವು ಅಮೆರಿಕಗೆ ಬಂದ ಮೇಲೆನೇ ಅವನು ಹೊರಡಬೇಕು ಎಂದು ಅವನು ಡಿಸೈಡ್ ಮಾಡಿದ್ದ ಅನ್ಸುತ್ತೆ.

ಊಟ ಮಾಡುವಾಗ ನಿಶು ಚೇರ್ ಹಿಂದೆ, ಆಮೇಲೆ ನಿವಿ ಜೊತೆಗೆ ಹಾಗೂ ಮಲಗುತ್ತಿದ್ದಿದ್ದು ನಮ್ಮ ಜೊತೆಗೆ. ಈಗ ಒಂದು ತಿಂಗಳಿಂದ ರಾತ್ರಿ ಶಿವಣ್ಣನಿಗೆ ಅಂಟಿಕೊಂಡು ಮಲಗುತ್ತಿದ್ದ. ಮೊದಲ್ಲೆಲ್ಲಾ ಅವನು ಹೀಗೆ ಮಾಡಿದವನಲ್ಲ. ನೆನ್ನೆ ಮಾತನಾಡುವಾಗ ನಿವಿ ‘ಅವನಿಗೆ ಪಪ್ಪನಿಗೆ ಏನು ಆಗ್ತಾ ಇತ್ತು ಅಂತ ಗೊತ್ತಿತ್ತು ಅಂನ್ಸುತ್ತೆ, ಅದಕ್ಕೆ ಹಾಗೆ ಮಲಗುತ್ತಿದ್ದ’ ಅಂದಳು. ನನಗೂ ಹಾಗೆ ಅನ್ನಿಸಿತು. ನಾವು ಅಲ್ಲೇ ಇದ್ದರೆ ತುಂಬಾ ಕಷ್ಟ ಪಡ್ತೀವಿ ಹಾಗೂ ಈ ಸಮಯದಲ್ಲಿ ಕಷ್ಟ ಪಡಬಾರದೆಂದು ಕಾದು ನನ್ನ ಮರಿ ನಮ್ಮೆಲ್ಲರನ್ನು ಬಿಟ್ಟು ಹೋದ. ಅವನನ್ನು ನಮ್ಮ ಜೀವನದ ಭಾಗವಾಗಿ ಕರೆದುಕೊಂಡು ಬಂದಿದ್ದು ಹಾಗೂ ಅವನು ಹೊರಡುವಾಗ ಜೊತೆಯಲ್ಲೇ ನಿಂತಿದ್ದು ದಿಲೀಪ್. ನಮ್ಮ ಮನೆಯಲ್ಲಿ ಕಿರಣ, ಆಕಾಶ್, ಗಂಗಮ್ಮ, ಮನು, ಚಿಕ್ ಮನು ಎಲ್ಲರೂ ನೀಮೋನನ್ನು ಅವರ ಸ್ವಂತ ಮಗುವಿನಂತೆ ನೋಡಿಕೊಂಡಿದ್ದಾರೆ. ಅವರ ಕುಟುಂಬದ ಭಾಗದಂತೆ ನೋಡಿಕೊಂಡಿದ್ದಾರೆ. ಲಾವಣ್ಯಾ, ದಿಗಂತ್ ಹಾಗೂ ಅವರ ಮಗ ವಿಷ್ಣು, ಇವರಿಗೂ ನೀಮೋ ಅಂದರೆ ಅಷ್ಟೇ ಪ್ರೀತಿ. ವಿಷ್ಣು ಮತ್ತು ನೀಮೋ ಆಟ ಆಡುವಾಗ ಅಥವಾ ವಿಷ್ಣು ಅವನ ಬಳಿ ಮಾತನಾಡೋದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ನೀಮೋ ಸದಾ ನಮ್ಮೊಳಗಿದ್ದಾನೆ, ನನ್ನೊಳಗಿದ್ದಾನೆ. ಯಾವಾಗೂ ಇರ್ತಾನೆ. ಅವನು ಹೋಗಿದ್ದನ್ನು ನಾನು ಕಣ್ಣಲ್ಲಿ ನೋಡಿಲ್ಲ. ನೋಡಿದ್ದರೂ ಅವನು ಹೋಗಿದ್ದಾನೆ ಎಂದು ನಾನು ಎಂದೂ ಒಪ್ಪಿಕೊಳ್ಳಲ್ಲ. ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗೋವಾಗ ನಮ್ಮ ನೋವನ್ನೂ ಅವರ ಜೊತೆಯಲ್ಲಿ ತಗೆದುಕೊಂಡು ಹೋಗ್ತಾವಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತಗೊಂಡಿದ್ದಾನೆ.

ಲವ್ ಯು ನೀಮೋ,

ಗೀತಾ ಶಿವರಾಜಕುಮಾರ್

ವಿಡಿಯೊ: ನಟ ಶಿವರಾಜ್ ಕುಮಾರ್ ಅವರಿಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ
.ತಮಿಳು, ಮಲಯಾಳಂನಲ್ಲಿ ವಿಭಿನ್ನ ಚಿತ್ರಗಳನ್ನು ಸ್ವೀಕರಿಸುತ್ತಾರೆ: ಶಿವರಾಜ್ಕುಮಾರ್.ಒಟಿಟಿಯಲ್ಲಿ ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.