ಹೀಗಾಯ್ತು ಕೇಳಿ ‘ಸಿಂಹಪ್ರಿಯಾ’ ಲವ್ಸ್ಟೋರಿ

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಜೋಡಿ ಇತ್ತೀಚೆಗಷ್ಟೇ ದುಬೈ ಸುತ್ತಾಡಿಕೊಂಡು ಬಂದು, ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಕೆಲ ವಾರದ ಹಿಂದಷ್ಟೇ ಈ ಜೋಡಿ ಪ್ರೀತಿಯಲ್ಲಿದೆ ಎಂಬ ಸುದ್ದಿ ಹುಟ್ಟಿಕೊಂಡಾಗ, ಇಬ್ಬರೂ ಜೊತೆಗಿರುವ ಫೋಟೊ, ಡ್ಯಾನ್ಸ್ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಹರಿದಾಡತೊಡಗಿದ್ದವು. ಹೀಗಿದ್ದಾಗ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದ್ದು ಯಾವಾಗ ಎನ್ನುವ ಪ್ರಶ್ನೆಯೂ ಉದ್ಭವಿಸಿತ್ತು.
ಇವೆಲ್ಲವುದಕ್ಕೂ ಇದೀಗ ಸ್ವತಃ ಹರಿಪ್ರಿಯಾ ಅವರೇ ಉತ್ತರಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊವೊಂದನ್ನು ಅಪ್ಲೋಡ್ ಮಾಡಿರುವ ಅವರು, ವಿಶೇಷ ವಿಡಿಯೊವೊಂದಕ್ಕೆ ತಾವೇ ಧ್ವನಿ ನೀಡಿ, ತಮ್ಮ ಪ್ರೇಮಕಥೆಯನ್ನು ಜನರೆದುರಿಗೆ ಇಟ್ಟಿದ್ದಾರೆ.
ವಸಿಷ್ಠ ಸಿಂಹ ಅವರು ವರ್ಷದ ಹಿಂದೆ ಹರಿಪ್ರಿಯಾ ಅವರಿಗೆ ನೀಡಿದ್ದ ಕ್ರಿಸ್ಟಲ್ ಹೆಸರಿನ ಶ್ವಾನವನ್ನು ಗಿಫ್ಟ್ ಮಾಡಿದ್ದರಂತೆ. ಆ ಶ್ವಾನವೇ ಇವರ ಪ್ರೀತಿಗೆ ಕನ್ನಡಿ ಹಿಡಿದಿದೆ ಎಂದಿದ್ದಾರೆ ಹರಿಪ್ರಿಯಾ. ಕ್ರಿಸ್ಟಲ್ ಹೊತ್ತು ತಂದ ‘ಸೀಕ್ರೆಟ್ ಮೆಸೇಜ್’ ಯಾವುದು ಎಂದೂ ಈ ವಿಡಿಯೊದಲ್ಲಿ ಹರಿಪ್ರಿಯಾ ಹೇಳಿದ್ದಾರೆ.
ಕೈಕೈ ಹಿಡಿದು ಕಾಣಿಸಿಕೊಂಡ ವಸಿಷ್ಟ ಸಿಂಹ–ಹರಿಪ್ರಿಯಾ, ಶೀಘ್ರವೇ ಮದುವೆ?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.