ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿವಯಸ್ಸಿನಲ್ಲೂ ಕುಂದದ ಖಳನಾಯಕ ಮೋಹನ್‌ ಖದರು

Published 14 ಡಿಸೆಂಬರ್ 2023, 23:30 IST
Last Updated 14 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಮಾಡುವ ಕೆಲಸದಲ್ಲಿ ಪ್ರೀತಿಯಿದ್ದರೆ, ಯಾವ ಕೆಲಸಕ್ಕೂ ವಯಸ್ಸು ಅಡ್ಡಿಯಾಗಲಾದರು ಎನ್ನುವುದಕ್ಕೆ ಸಾಕ್ಷಿಯಂತಿದೆ ಖಳನಾಯಕ ಮೋಹನ್‌ ಅವರ ಕಥೆ. ‘ರಾಬರ್ಟ್‌’ ಸಿನಿಮಾದಲ್ಲಿ ‘ಕಟ್ಟಪ್ಪ’ನಾಗಿ ತಮ್ಮ 59ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದ್ದ ಮೋಹನ್‌ಗೆ ಖಳನಾಯಕನಾಗಿ ಸಾಕಷ್ಟು ಅವಕಾಶಗಳು ಬರುತ್ತಿವೆ.

‘ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕನಾಗಿ ನಿವೃತ್ತಿಯಾಗಿದ್ದೆ. ಜಿಮ್‌ವೊಂದರಲ್ಲಿ ನಿರ್ದೇಶಕ ತರುಣ್‌ ಸುಧೀರ್‌, ನಟ ‘ನೆನಪಿರಲಿ ಪ್ರೇಮ್‌’ ಸೇರಿದಂತೆ ಚಿತ್ರರಂಗದ ಹಲವರ ಪರಿಚಯವಾಯ್ತು. ನನ್ನ ಆರಡಿ ಎತ್ತರದ ದೇಹ ನೋಡಿ ನಿರ್ದೇಶಕ ತರುಣ್‌ ‘ರಾಬರ್ಟ್‌’ ಸಿನಿಮಾದಲ್ಲಿ ಅವಕಾಶ ಕೊಟ್ಟರು. ಅಲ್ಲಿಂದ ನಂತರ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಸಿಗುತ್ತಿವೆ’ ಎನ್ನುತ್ತಾರೆ ಮೋಹನ್‌.

‘ರಾಬರ್ಟ್‌’ನಲ್ಲಿ ಖಳನಟ ರವಿಶಂಕರ್‌ ಅವರ ಬಲಗೈ ಬಂಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೋಹನ್‌, ದರ್ಶನ್‌ ಅವರ ‘ಕಾಟೇರ’ ಚಿತ್ರದಲ್ಲಿಯೂ ಒಂದೊಳ್ಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಗೆ ಸಿದ್ಧವಿರುವ ‘ಘಾರಾ’, ‘ಅಥರ್ವ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ಅವರ ಹೊಸ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

‘ಮನಸ್ಸಿದ್ದರೆ ಮಾರ್ಗ. ಯಾವ ಕೆಲಸಕ್ಕೂ ವಯಸ್ಸು ಅಡ್ಡಿ ಬರುವುದಿಲ್ಲ. ನಟನೆ ನಿರಂತರ ಕಲಿಕೆ. ಜೊತೆಗೆ ಪ್ರತಿನಿತ್ಯ ಎರಡು ಗಂಟೆ ವರ್ಕೌಟ್‌ ಮಾಡಿ ಫಿಟ್‌ನೆಸ್‌ ಕಾಪಾಡಿಕೊಳ್ಳುತ್ತಿರುವೆ. ಇನ್ನಷ್ಟು ಅವಕಾಶಗಳಿಗೆ ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ ಮೋಹನ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT