‘ಕೂಲಿ’, ‘ವಾರ್–2’ ತೆರೆ ಕಂಡಿರುವುದು ಹಾಗೂ ಮೂರನೇ ವಾರದ ಬಳಿಕವೂ ಚಿತ್ರಮಂದಿರಗಳಿಗೆ ಜನರನ್ನು ಸೆಳೆಯುತ್ತಿರುವ ‘ಸು ಫ್ರಂ ಸೋ’ ಚಿತ್ರದ ಅಬ್ಬರದಿಂದಾಗಿ ಈ ವಾರ ಯಾವುದೇ ಕನ್ನಡ ಸಿನಿಮಾ ತೆರೆ ಕಂಡಿಲ್ಲ. ವರ್ಷದ ಪ್ರಾರಂಭದಲ್ಲಿ ವಾರಕ್ಕೆ 12 ಸಿನಿಮಾಗಳು ತೆರೆ ಕಂಡಿದ್ದವು. ನಂತರ ಚಿತ್ರ ಬಿಡುಗಡೆ ಪ್ರಮಾಣ ಕುಸಿದಿದ್ದರೂ, ಯಾವುದೇ ಸಿನಿಮಾವೂ ತೆರೆ ಕಾಣದ ವಾರ ಬಹಳ ಅಪರೂಪ.

ಜು.25ಕ್ಕೆ ‘ಸು ಫ್ರಂ ಸೋ’ ತೆರೆ ಕಂಡಿತ್ತು. ಅದಕ್ಕೆ ಜನರ ಪ್ರತಿಕ್ರಿಯೆ ನೋಡಿ ಆ.1ರಂದು ತೆರೆ ಕಾಣಬೇಕಿದ್ದ ಸಾಕಷ್ಟು ಸಿನಿಮಾಗಳು ಮುಂದಕ್ಕೆ ಹೋಗಿವೆ. ಆಗಸ್ಟ್ ಎರಡನೇ ವಾರ ಒಂದೆರಡು ಸಿನಿಮಾಗಳು ಮಾತ್ರ ತೆರೆಕಂಡಿವೆ. ಯಾವುದೇ ಪ್ರಚಾರವಿಲ್ಲದೆ ತೆರೆಗೆ ಬಂದಹೋದ ಚಿತ್ರಗಳವು. ಆ.15 ಸೇರಿದಂತೆ ಸರಣಿ ರಜೆಗಳಿದ್ದರೂ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಧೈರ್ಯ ತೋರಿಲ್ಲ.

ರಜನಿಕಾಂತ್ ನಟನೆಯ ‘ಕೂಲಿ’ ಗುರುವಾರ ರಾಜ್ಯದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿದೆ. ಅದರ ನಡುವೆ ‘ಸು ಫ್ರಂ ಸೋ’ ಚಿತ್ರದ ಶೋಗಳು ಕೂಡ ಬಹುತೇಕ ಹೌಸ್ಫುಲ್ ಆಗಿವೆ. ವಾರ್–2 ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.