ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಷ್ಣುಪ್ರಿಯ’ನಿಗೆ ಶರಣ್- ರುಕ್ಮಿಣಿ ಸಾಥ್‌

Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ಶ್ರೇಯಸ್ ಮಂಜು ಹಾಗೂ ಪ್ರಿಯಾ ವಾರಿಯರ್‌ ಜೋಡಿಯಾಗಿ ನಟಿಸಿರುವ ‘ವಿಷ್ಣುಪ್ರಿಯ’ ಚಿತ್ರದ ಹಾಡೊಂದು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಶರಣ್‌ ಹಾಗೂ ನಟಿ ರುಕ್ಮಿಣಿ ವಸಂತ ಈ ಚಿತ್ರದ ‘ಚಿಗುರು ಚಿಗುರು ಸಮಯ’ ಗೀತೆಯನ್ನು ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

ವಿ.ಕೆ. ಪ್ರಕಾಶ್ ನಿರ್ದೇಶನವಿದ್ದು, ನಿರ್ಮಾಪಕ ಕೆ.ಮಂಜು ತಮ್ಮ ಪುತ್ರನ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘1990ರ ಕಾಲಘಟ್ಟದಲ್ಲಿ ನಡೆದಂತಹ ಮಾಸ್ ಲವ್ ಸ್ಟೋರಿ. ಶ್ರೇಯಸ್‌ ಮಂಜು ಲವರ್ ಬಾಯ್ ವಿಷ್ಣು ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ಆಲೋಚಿಸಿದ್ದೇವೆ’ ಎಂದರು ನಿರ್ದೇಶಕರು.

‘ಕೆಲವು ಹಾಡುಗಳು ಥಟ್ ಅಂತ ಮೆದುಳಿಗೇ ನಾಟುತ್ತವೆ. ಅಂತಹ ಹಾಡೊಂದು ಈ ಚಿತ್ರದಲ್ಲಿದೆ. ಇದೊಂದು ಫೀಲ್ ಗುಡ್ ಸಿನಿಮಾ. ನಿರ್ದೇಶಕರ ಕೆಲಸ ಪ್ರತಿ ಫ್ರೇಮ್‌ನಲ್ಲೂ ಕಾಣಿಸುತ್ತದೆ. ಶೀರ್ಷಿಕೆಯಲ್ಲೇ ವಿಷ್ಣು ಸರ್ ಇದ್ದಾರೆ. ಈ ವರ್ಷದ ಆರಂಭಕ್ಕೆ ಒಂದು ಅದ್ಭುತವಾದ ಸಾಂಗ್ ಸಿಕ್ಕಿದೆ’ ಎಂದರು ನಟ ಶರಣ್‌.

ಮಲೆಯಾಳದ ಜನಪ್ರಿಯ ಸಂಗೀತ ನಿರ್ದೇಶಕ ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆ ಈ ಚಿತ್ರದ ಹಾಡುಗಳಿಗಿದೆ. ವಿನೋದ್ ಭಾರತಿ ಅವರ ಛಾಯಾಗ್ರಹಣವಿದ್ದು, ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್, ನಿಹಾಲ್ ರಾಜ್ ಮೊದಲಾದವರು ತಾರಾಗಣಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT