ಶನಿವಾರ, ಡಿಸೆಂಬರ್ 4, 2021
26 °C

ಕನ್ನಡ ಹಾರರ್‌ ಚಿತ್ರ: ‘ಇಲ್ಲಿಂದ ಆರಂಭವಾಗಿದೆ’ ಇನ್ನೊಂದು ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಇಲ್ಲಿಂದ ಆರಂಭವಾಗಿದೆ’ ಹಾರರ್‌ ಚಿತ್ರಗಳ ಸಾಲಿಗೆ ಇನ್ನೊಂದು ಸೇರ್ಪಡೆ. ಟಾಲಿವುಡ್ ನಿರ್ಮಾಪಕ ಬಿ.ನರಸಿಂಹರೆಡ್ಡಿ ಈ ಚಿತ್ರದ ನಿರ್ಮಾಪಕ ಮತ್ತು ಸಿಐಡಿ ಪಾತ್ರಧಾರಿಯಾಗಿದ್ದಾರೆ. ಲಕ್ಷಣಚಪರ್ಲ ನಿರ್ದೇಶಕರು.

ಕುತೂಹಲ, ಹಾರರ್‌, ನವಿರು ಪ್ರೀತಿ, ತಾಯಿ ಮಗಳ ಬಾಂಧವ್ಯ ಇತ್ಯಾದಿ ಕಥೆಯ ಹೂರಣ ಚಿತ್ರದಲ್ಲಿದೆ. ಸತ್ಯ ನ್ಯಾಯಕ್ಕೆ ಎಂದಿಗೂ ಗೆಲುವು ಸಿಗಲಿದೆ ಎಂದು ಹೇಳಿದ್ದೇವೆ ಎಂದಿದೆ ಚಿತ್ರ ತಂಡ.

ಕೀರ್ತಿಕೃಷ್ಣ ನಾಯಕ. ನಿಖಿತಾಸ್ವಾಮಿ ಮತ್ತು ಮಧುಬಾಲ ನಾಯಕಿಯರು. ಇವರೊಂದಿಗೆ ಬಾಲಿವುಡ್ ನಟರಾದ ಪ್ರದೀಪ್‌ರಾವುತ್, ಶಾಹುರಾಜ್‌ ಶಿಂದೆ ಹಾಗೂ ಮಗಧೀರ ಖ್ಯಾತಿಯ ದೇವ್‌ಗಿಲ್ ಹಾಗೂ ಕನಕಪುರದ ಸ್ಥಳೀಯ ಕಲಾವಿದರು ಇದ್ದಾರೆ. ಬೆಂಗಳೂರು, ಮಂಗಳೂರು, ಕನಕಪುರ, ಪಾವಗಡ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪುಷ್ಪ ಫಿಲಂಸ್‌ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸದ್ಯದಲ್ಲೆ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದಿದೆ ಚಿತ್ರತಂಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು