ಭಾನುವಾರ, ನವೆಂಬರ್ 29, 2020
21 °C

ಸೀತಾಯಣ ಟೀಸರ್‌ ನ. 11ರಂದು ಯುಟ್ಯೂಬ್‌ನಲ್ಲಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯ ನಟ ಶಶಿಕುಮಾರ್‌ ಅವರ ಪುತ್ರ ಅಕ್ಷಿತ್‌ ಶಶಿಕುಮಾರ್‌ ಅಭಿನಯದ ‘ಸೀತಾಯಣ’ ಚಿತ್ರದ ಟೀಸರ್‌ ನ. 11ರಂದು ಯುಟ್ಯೂಬ್‌ನಲ್ಲಿ ಬಿಡುಗಡೆ ಆಗಲಿದೆ. 

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ಟೀಸರ್‌ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 2.45ಕ್ಕೆ ಟೀಸರ್‌ ಯುಟ್ಯೂಬ್‌ನಲ್ಲಿ ಲಭ್ಯವಾಗಲಿದೆ. 

ಕಲರ್ಸ್‌ ಕ್ಲೌಡ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯ ಅಡಿ ಲಲಿತಾ ರಾಜಲಕ್ಷ್ಮೀ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಗೊಳ್ಳಲಿದೆ.

ಮುಂಬೈ ಬೆಡಗಿ ಅನಹಿತಭೂಷಣ್ ಚಿತ್ರದ ನಾಯಕಿ. ವಿಕ್ರಂಶರ್ಮ, ಶರ್ಮಿತಾಗೌಡ, ಮಧುಸೂದನ್, ಮೇಘನಾಗೌಡ, ಅಜಯ್‌ಘೋಷ್, ಹಿತೇಶ್, ವಿಧೆಯು ಲೇಖರಮನ್, ಬಿತ್ರಿಸತ್ತಿ, ಟಿಎನ್‌ಆರ್, ಕೃಷ್ಣಭಗವಾನ್, ಬೇಬಿ ಟ್ರೈಕ್ಷಾ, ಅನಂತಬಾಬು, ಗುಂಡು ಸುದರ್ಶನ್, ಮಧುಮಣಿ, ಜಬರ್‌ದಸ್ತ್ ಅಪ್ಪರಾವ್, ಲೋಬೋ ತಾರಾಗಣದಲ್ಲಿದ್ದಾರೆ.

ಕವಿರಾಜ್, ಗೌಸ್‌ಪೀರ್ ಸಾಹಿತ್ಯವಿದೆ. ಪದ್ಮನಾಭ್ ‌ಭಾರದ್ವಾಜ್ ಸಂಗೀತ ನೀಡಿದ್ದಾರೆ. 63 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ದುರ್ಗಾಪ್ರಸಾದ್‌ ಕೊಲ್ಲಿ ಛಾಯಾಗ್ರಹಣವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.