ಸೋಮವಾರ, ಮೇ 17, 2021
23 °C

‘ಕನ್ನಡ ಕನ್ನಡ’ ಹಾಡಿಗೆ ನಟರು, ನೆಟ್ಟಿಗರು ಫುಲ್‌ ಫಿದಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಗೀತಾ ಚಿತ್ರದ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹಾಡಿರುವ ‘ಕನ್ನಡ ಕನ್ನಡ ಕನ್ನಡವೇ ಸತ್ಯ’ ಕನ್ನಡ ಜಾಗೃತಿ ಹಾಗೂ ಹೋರಾಟದ ಲಿರಿಕಲ್‌ ಹಾಡನ್ನು ಚಿತ್ರತಂಡವು ಶನಿವಾರ ಬಿಡುಗಡೆ ಮಾಡಿದೆ. ಚಿತ್ರರಂಗದ ಹಲವು ನಟರು ಈ ಹಾಡಿಗೆ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ನೆಟ್ಟಿಗರು ಹಾಡನ್ನು ಇಷ್ಟಪಟ್ಟು, ಮೆಚ್ಚುಗೆಯ ಮಾತುಗಳನ್ನು ಟ್ವೀಟ್‌ ಮಾಡಿದ್ದಾರೆ.

ಈ ಹಾಡಿನ ಸಾಹಿತ್ಯವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿದ್ದು, ಪುನೀತ್ ರಾಜ್ ಕುಮಾರ್ ಕಂಠ ಮಾಧುರ್ಯದಲ್ಲಿ ಹಾಡು ಸೊಗಸಾಗಿ ಮೂಡಿಬಂದಿದೆ. ಗೋಕಾಕ ಚಳವಳಿಯ ನೆನಪು ಮರುಕಳಿಹಿಸುವಂತೆ ಮಾಡುವ ಈ ಹಾಡನ್ನು ಚಿತ್ರ ತಂಡವು ಸ್ವಾಭಿಮಾನಿ ಕನ್ನಡಿಗರಿಗೆ ಅರ್ಪಣೆ ಮಾಡಿದೆ.

ಇದನ್ನೂ ಓದಿ: ಗೀತಾ ಚಿತ್ರದ ಹಾಡು ಸ್ವಾಭಿಮಾನಿ ಕನ್ನಡಿಗರಿಗೆ ಅರ್ಪಣೆ

‘ಕನ್ನಡ ಕನ್ನಡ ಕನ್ನಡವೇ ಸತ್ಯ..ಕನ್ನಡ ಕನ್ನಡ ಕನ್ನಡವೇ ನಿತ್ಯ...ಕನ್ನಡದ ಗರಿಮೆ, ಹಿರಿಮೆ ಸಾರುತ್ತ, ಮೈ ನವಿರೇಳಿಸುವ ಈ ಹಾಡು ನಮ್ಮೆಲ್ಲಾ ಕೆಚ್ಚೆದೆಯ ಕನ್ನಡ ಹೋರಾಟಗಾರರಿಗೆ, ಗೋಕಾಕ ಹೋರಾಟದಲ್ಲಿ ಹೋರಾಡಿದ ಕಲಿಗಳಿಗೆ, ಸ್ವಾಭಿಮಾನಿ ಕನ್ನಡಿಗ ಬಂಧುಗಳಿಗೆ ಅರ್ಪಣೆ’ ಮಾಡಿದ್ದೇವೆ ಎಂದು ನಟ ಗೋಲ್ಡಾನ್‌ ಸ್ಟಾರ್‌ ಗಣೇಶ್‌ ಟ್ವೀಟ್‌ ಮಾಡಿದ್ದಾರೆ.

ನಟರಾದ ರಮೇಶ್‌ ಅರವಿಂದ್‌, ಪ್ರೇಮ್‌, ಧೀರೇನ್‌,  ಬಿಗ್‌ಬಾಸ್‌ ವಿಜೇತ ಪ್ರಥಮ್‌, ನಿರ್ದೇಶಕ ನಾಗಶೇಖರ್‌, ಮಯೂರ್‌ ರಾಘವೇಂದ್ರ, ಪವನ್‌ ಒಡೆಯರ್‌, ಪ್ರಶಾಂತ್‌ ರೈ, ವಿಜಯ್‌ ಕಿರಗಂದೂರ್‌ ಸೇರಿದಂತೆ ಚಿತ್ರರಂಗದ ಹಲವು ಮಂದಿ ಈ ಹಾಡನ್ನು ಮೆಚ್ಚಿ, ಈ ಹಾಡನ್ನು ಆಲಿಸುವಂತೆ ವೀಕ್ಷಕರಿಗೂ ಮನವಿ ಮಾಡಿದ್ದಾರೆ.

ಲಿಂಕ್‌:  https://youtu.be/9lWV_8lbXmE

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು