ತಿಲಕ್ ಶೇಖರ್ ಹಾಗೂ ಪ್ರಿಯಾ ನಟಿಸಿರುವ, ಪನೇಮ್ ಪ್ರಭಾಕರ್ ನಿರ್ದೇಶನದ ‘ಉಸಿರು’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರ ಆ.29ರಂದು ತೆರೆಗೆ ಬರಲಿದೆ.

‘ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು’ ಎಂಬ ಪರಿಕಲ್ಪನೆ ಮೇಲೆ ಈ ಸಿನಿಮಾ ತಯಾರಾಗಿದೆ ಎಂದಿದೆ ಚಿತ್ರತಂಡ. ಆರ್.ಎಸ್.ಪಿ. ಪ್ರೊಡಕ್ಷನ್ ಮೂಲಕ ಲಕ್ಷ್ಮಿ ಹರೀಶ್ ನಿರ್ಮಿಸಿರುವ, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ ಇದಾಗಿದೆ. ಚಿತ್ರಕ್ಕೆ ಪನೇಮ್ ಪ್ರಭಾಕರ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ.

ಅನಾಮಧೇಯ ವ್ಯಕ್ತಿಯಿಂದ ಹೆಂಡತಿಯ ಪ್ರಾಣಕ್ಕೆ ಆಪತ್ತು ಬಂದಾಗ ಪೊಲೀಸ್ ಅಧಿಕಾರಿಯೊಬ್ಬ ತನ್ನ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುವುದೇ ಚಿತ್ರದ ಕಥೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ‘ನನ್ನ ನಿರ್ದೇಶನದ ಚೊಚ್ಚಲ ಸಿನಿಮಾವಿದು. ಚಿತ್ರದ ಕಥೆಯೇ ಸಿನಿಮಾದ ಹೀರೊ. ಒಂದು ಭಾವನಾತ್ಮಕ ಕಥೆಯೂ ಸಿನಿಮಾದಲ್ಲಿದ್ದು, ಪ್ರತಿಯೊಂದು ಪಾತ್ರಕ್ಕೂ ಕಥೆಯಲ್ಲಿ ಪ್ರಾಮುಖ್ಯತೆ ನೀಡಲಾಗಿದೆ’ ಎಂದರು ಪ್ರಭಾಕರ್.

‘ನಾನು ಒಬ್ಬ ಇನ್ವೆಸ್ಟಿಗೇಶನ್ ಆಫೀಸರ್ ಆಗಿ ನಟಿಸಿದ್ದೇನೆ’ ಎಂದು ಮಾತು ಆರಂಭಿಸಿದ ತಿಲಕ್, ‘ಈ ರೀತಿಯ ಕಾನ್ಸೆಪ್ಟ್ ನಾನು ಎಲ್ಲೂ ಕೇಳಿಲ್ಲ. ಇದು ಬರೀ ಮರ್ಡರ್ ಮಿಸ್ಟ್ರಿಯಲ್ಲ. ಹಲವು ಪದರಗಳು ಕಥೆಯೊಳಗಿದೆ. ಚಿತ್ರದಲ್ಲಿ ಬಹಳ ಕುತೂಹಲಕಾರಿ ಅಂಶಗಳು ಇವೆ’ ಎಂದರು. ಚಿತ್ರಕ್ಕೆ ಆರ್.ಎಸ್.ಗಣೇಶ್ ನಾರಾಯಣನ್ ಸಂಗೀತ ನಿರ್ದೇಶನವಿದೆ. ಸಂತೋಷ್ ನಂದಿವಾಡ, ಅಪೂರ್ವ ನಾಗರಾಜು, ಅರುಣ್ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.