ಭಾನುವಾರ, ಜೂನ್ 26, 2022
26 °C

ನಮ್ಮ ನಮ್ಮಲ್ಲೇ ಸ್ಪರ್ಧೆ ಏಕೆ: ಎಲ್ಲವೂ ಸೇರಿದರೆ ಇಂಡಿಯನ್ ಸಿನಿಮಾ–ಕರಣ್ ಜೋಹರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

dh file

ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಯಾರಾಗಿ ಬಾಲಿವುಡ್‌ನಲ್ಲೂ ಹೆಸರು ಮಾಡಿದ ಕೆಜಿಎಫ್‌, ಆರ್‌ಆರ್‌ಆರ್‌ ಮತ್ತು ಪುಷ್ಪಾ ಚಿತ್ರದ ಅಭೂತಪೂರ್ವ ಯಶಸ್ಸಿನ ಬಗ್ಗೆ ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ–ನಮ್ಮಲ್ಲೇ ಸ್ಪರ್ಧೆ ಯಾಕಿರಬೇಕು? ಅವರ ಗೆಲುವು ಕೂಡ ನಮ್ಮದೇ, ಅದನ್ನು ನಾವು ಸಂಭ್ರಮಿಸಬೇಕು. ಎಲ್ಲವೂ ಸೇರಿದರೆ ಇಂಡಿಯನ್ ಸಿನಿಮಾ. ಅದನ್ನು ನಾವು ಜಾಗತಿಕ ಮಟ್ಟಕ್ಕೆ ಒಯ್ಯಬೇಕು. ಅದರ ಬದಲು, ದಕ್ಷಿಣ–ಉತ್ತರ ಎಂದು ನಾವು ಸ್ಪರ್ಧೆ ಮಾಡುತ್ತಾ ಇದ್ದರೆ ಪ್ರಯೋಜನವಿಲ್ಲ ಎಂದು ಕರಣ್ ಜೋಹರ್ ಹೇಳಿದ್ದಾರೆ.

ತಮ್ಮ ನಿರ್ಮಾಣ ಸಂಸ್ಥೆಯ ಹೊಸ ಸಿನಿಮಾ ಜುಗ್ ಜುಗ್ಗ್‌ ಜೀಯೊ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಪ್ರಶಾಂತ್ ನೀಲ್ ಸರ್, ರಾಜಮೌಳಿ ಸಾಬ್ ಮತ್ತು ಸುಕುಮಾರ್ ಅವರು, ನಾವು ಇನ್ನಷ್ಟು ಸಾಧಿಸಿ ತೋರಿಸಬಹುದು ಎಂದು ನಿರೂಪಿಸಿದ್ದಾರೆ. ಹೀಗಿರುವಾಗ, ನಾವೆಲ್ಲರೂ ಆ ಬಗ್ಗೆ ಹೆಮ್ಮೆ ಪಡಬೇಕು ಎಂದು ಕರಣ್ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು