ಗುರುವಾರ , ಆಗಸ್ಟ್ 11, 2022
20 °C

ದುಲ್ಕರ್ ಎರಡನೇ ತೆಲುಗು ಚಿತ್ರಕ್ಕೆ ಕರಾವಳಿ ಬೆಡಗಿ ನಾಯಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲಿವುಡ್‌ ಸ್ಟಾರ್‌ ನಟ ದುಲ್ಕರ್‌ ಸಲ್ಮಾನ್ ತಮ್ಮ ಎರಡನೇ ತೆಲುಗು ಚಿತ್ರಕ್ಕೆ ಈಗಾಗಲೇ ಸಹಿ ಹಾಕಿದ್ದಾರೆ. ಈ ಚಿತ್ರವನ್ನು ‘ಅಂದಾಲ ರಾಕ್ಷಸಿ’ ಖ್ಯಾತಿಯ ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರಕ್ಕೆ ನಾಯಕಿಯಾಗಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂಜಾ ಈಗ ತೆಲುಗಿನಲ್ಲಿ ಹೆಚ್ಚು ಬೇಡಿಕೆ ಇರುವ ನಟಿ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ಪೂಜಾ ದುಲ್ಕರ್‌ಗೆ ಜೋಡಿಯಾಗಲಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸುತ್ತಿದ್ದಾರೆ.

‘ಅಲಾ ವೈಕುಂಟಪುರಮುಲೊ’ ಚಿತ್ರ ಯಶಸ್ಸು ಪೂಜಾ ಅವರನ್ನು ಬೇರೆಯದೇ ಸ್ಥಾನಕ್ಕೆ ಕರೆದ್ಯೊದಿದೆ. ಪೂಜಾ ಈಗ ಪ್ರಭಾಸ್ ನಟನೆಯ ‘ರಾಧೆ ಶ್ಯಾಮ’ ಹಾಗೂ ಅಖಿಲ್ ಅಕ್ಕಿನೇನಿ ನಟನೆಯ ‘ಮೋಸ್ಟ್ ಎಲಿಜಬಲ್ ಬ್ಯಾಚುಲರ್’ ಚಿತ್ರಗಳನ್ನು ಮುಗಿಸಬೇಕಿದೆ. 30 ವರ್ಷದ ಈ ನಟಿಯ ಕೈಯಲ್ಲಿ ಮೂರು ಹಿಂದಿ ಸಿನಿಮಾಗಳಿದ್ದು ಮುಂದಿನ ವರ್ಷ ಶೂಟಿಂಗ್ ಆರಂಭವಾಗಲಿದೆ.

ದುಲ್ಕರ್ ಸಲ್ಮಾನ್ ನಟನೆಯ, ಹನು ರಾಘವಪುಡಿ ನಿರ್ದೇಶನದ ಈ ಸಿನಿಮಾಕ್ಕೆ ವಿಶಾಲ್ ಚಂದ್ರಶೇಖರ್ ಸಂಗೀತ ನಿರ್ದೇಶನವಿದ್ದು ವೈಜಯಂತಿ ಮೂವಿ ಹಾಗೂ ಸಪ್ನಾ ಸಿನಿಮಾ ಸಂಸ್ಥೆಗಳು ಹಣ ಹೂಡಿಕೆ ಮಾಡಲಿವೆ. ರೊಮ್ಯಾಂಟಿಕ್ ಪ್ರೇಮಕಥೆಯುಳ್ಳ ಈ ಚಿತ್ರದಲ್ಲಿ ದುಲ್ಕರ್ ಸೈನಿಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು