ಮಂಗಳವಾರ, ಸೆಪ್ಟೆಂಬರ್ 21, 2021
21 °C

ಜಹಾಂಗೀರ್ ಖಾನ್: ಪುತ್ರನ ಹೆಸರು ಬಹಿರಂಗಪಡಿಸಿದ ಕರೀನಾ-ಸೈಫ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Kareena Kapoor Khan Instagram Screengrab

ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ದಂಪತಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮೊದಲ ಪುತ್ರ ತೈಮೂರ್ ಅಲಿ ಖಾನ್ ಹೆಸರು ಆಗಾಗ ಕೇಳಿಬರುತ್ತಲೇ ಇರುತ್ತದೆ. ಈ ದಂಪತಿಗೆ ಎರಡನೇ ಗಂಡು ಮಗು ಕಳೆದ ಫೆಬ್ರವರಿಯಲ್ಲಿ ಜನಿಸಿದ್ದು, ಹೆಸರು ಏನೆಂದು ಬಹಿರಂಗವಾಗಿರಲಿಲ್ಲ.

ಆದರೆ ಎರಡನೇ ಮಗುವಿನ ಹೆಸರನ್ನು ‘ಜೆಹ್’ ಎಂದು ಕರೆಯಲಾಗುತ್ತಿತ್ತು. ಇದೀಗ, ಕರೀನಾ-ಸೈಫ್ ದಂಪತಿಯ ಪುತ್ರನ ಹೆಸರನ್ನು ಕರೀನಾ ಅವರ ಹೊಸ ಪುಸ್ತಕದಲ್ಲಿ ಬಹಿರಂಗಪಡಿಸಲಾಗಿದೆ ಎಂದು ‘ಬಾಲಿವುಡ್ ಹಂಗಾಮ’ ಹೇಳಿದೆ.

ಕರೀನಾ-ಸೈಫ್ ದಂಪತಿಯ ಪುತ್ರನ ಹೆಸರು ‘ಜೆಹ್ ಅಲಿ ಖಾನ್’ ಎಂದಾಗಿದ್ದು, ಜಹಾಂಗೀರ್ ಅಲಿ ಖಾನ್ ಎನ್ನುವುದು ಪೂರ್ತಿ ಹೆಸರು ಎನ್ನಲಾಗಿದೆ. ಮೊದಲ ಪುತ್ರನ ಹೆಸರು ತೈಮೂರ್ ಅಲಿ ಖಾನ್ ಮತ್ತು ಎರಡನೇ ಪುತ್ರ ಜಹಾಂಗೀರ್ ಅಲಿ ಖಾನ್ ಎಂಬ ಚರ್ಚೆ ಬಾಲಿವುಡ್ ಅಂಗಳದಲ್ಲಿ ಆರಂಭವಾಗಿದೆ.

ಕರೀನಾ ಕಪೂರ್ ಇತ್ತೀಚೆಗೆ ‘ಕರೀನಾ ಕಪೂರ್ ಖಾನ್ಸ್ ಪ್ರೆಗ್ನೆನ್ಸಿ ಬೈಬಲ್: ದಿ ಅಲ್ಟಿಮೇಟ್ ಮ್ಯಾನ್ಯುವಲ್ ಫಾರ್ ಮಮ್ಸ್-ಟು-ಬಿ’ ಬಿಡುಗಡೆಯಾಗಿತ್ತು. ಅದರಲ್ಲಿ ಪುತ್ರನ ಹೆಸರಿನ ವಿವರವನ್ನು ಕರೀನಾ ಬಹಿರಂಗಪಡಿಸಿದ್ದಾರೆ.

ಅಲ್ಲದೆ, ಕರಣ್ ಜೊಹರ್ ಜತೆಗಿನ ಶೋ ಒಂದರಲ್ಲಿ ಕೂಡ ಕರೀನಾ ಪುತ್ರನ ಹೆಸರನ್ನು ‘ಜೆಹ್ ಅಲಿ ಖಾನ್’ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು