ಜಪಾನ್‌ನಲ್ಲಿ ತೆರೆಕಾಣಲಿದೆ ಕಾರ್ತಿ ಅಭಿನಯದ ಕೈತಿ ಚಿತ್ರ

ಬೆಂಗಳೂರು: ತಮಿಳು ನಟ ಕಾರ್ತಿ ಅಭಿನಯದ ಚಿತ್ರ ‘ಕೈತಿ’ ಜಪಾನ್‌ನಲ್ಲಿ ತೆರೆಕಾಣಲು ಸಜ್ಜಾಗಿದೆ.
ಕಾರ್ತಿ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದ ಕೈತಿ ಚಿತ್ರ, ತಮಿಳಿನಲ್ಲಿ ಜನಪ್ರಿಯತೆ ಗಳಿಸಿತ್ತು. ಚಿತ್ರ ಜಪಾನ್‌ನಲ್ಲಿ ನವೆಂಬರ್ 19ರಂದು ತೆರೆಕಾಣುತ್ತಿದೆ ಎಂದು ಡ್ರೀಮ್ ವಾರಿಯರ್ ಪಿಕ್ಚರ್ಸ್‌ನ ಎಸ್. ಆರ್. ಪ್ರಭು ಹೇಳಿದ್ದಾರೆ.
ಜಪಾನ್ ಮೂಲದ ವಿತರಕರೊಬ್ಬರು ಸಿನಿಮಾವನ್ನು ಜಪಾನ್‌ನಲ್ಲಿ ಪ್ರದರ್ಶಿಸುವ ಕುರಿತು ತಿಳಿಸಿದ ಬಳಿಕ, ಅದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಚಿತ್ರದ ನಿರ್ಮಾಪಕರೂ ಆಗಿರುವ ಎಸ್. ಆರ್. ಪ್ರಭು ತಿಳಿಸಿದ್ದಾರೆ.
ಕೈತಿ ಸಿನಿಮಾದ ಮೇಕಿಂಗ್ ಮತ್ತು ವ್ಯಾಪ್ತಿಯನ್ನು ಮನಗಂಡ ವಿತರಕರು, ಚಿತ್ರದ ಏರಿಯಾ ರೈಟ್ಸ್ ಕೂಡ ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ ಯಾವುದೇ ಹಾಡು ಮತ್ತು ನೃತ್ಯದ ದೃಶ್ಯಗಳು ಇಲ್ಲ, ಬದಲಾಗಿ ಕಥೆಯೇ ಪೂರ್ತಿ ಚಿತ್ರವನ್ನು ಆವರಿಸಿಕೊಳ್ಳುತ್ತದೆ. ಹೀಗಾಗಿ ಚಿತ್ರವನ್ನು ಅಲ್ಲಿನವರು ಮೆಚ್ಚಿಕೊಳ್ಳುತ್ತಾರೆ ಎಂದು ನಿರ್ಮಾಪಕರು ಹೇಳಿದ್ದಾರೆ.
Prajavani Celebrity Live: ಧಾರಾವಾಹಿ ನಟಿ-ಲೇಖಕಿ ರಂಜಿನಿ ರಾಘವನ್ ಜತೆ ಮುಖಾಮಖಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.