ಮುಂಬೈ: ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ ಹೊಂದಿರುವ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಅವರು ದೇಹ ದಂಡಿಸುವ ವಿಡಿಯೊಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಆ ಮೂಲಕ ಅವರ ಅಭಿಮಾನಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ.

ಇಂದು(ಶನಿವಾರ) ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಕತ್ರಿನಾ ಅವರು ತಮ್ಮ ದೇಹವನ್ನು ದಂಡಿಸುವಲ್ಲಿ ನಿರತರಾಗಿದ್ದಾರೆ. ಜಿಮ್ನಲ್ಲಿ ವಿವಿಧ ಸಲಕರಣೆಗಳೊಂದಿಗೆ ವರ್ಕೌಟ್ ಮಾಡುತ್ತಿರುವ ಅವರು ಬೆವರು ಹರಿಸುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದು.

ವಿಡಿಯೊ ಜೊತೆಗೆ ತಮ್ಮ ಟ್ರೈನರ್ ಕುರಿತು ಹೆಮ್ಮೆಯ ಮಾತುಗಳನ್ನು ಆಡಿರುವ ಕತ್ರಿನಾ, 'ನಾನು ನನ್ನ ಮನಸ್ಸಿಗೆ ತರಬೇತಿ ನೀಡುತ್ತೇನೆ. ಅದನ್ನು ನನ್ನ ದೇಹವು ಅನುಸರಿಸುತ್ತದೆ. ಒಂದು ವೇಳೆ ಇದು ನಡೆಯದೇ ಹೋದಾಗ ನಾನು ನನ್ನ ತರಬೇತುದಾರ ರೆಜಾ ಕಟಾನಿಯನ್ನು ಕರೆಯುತ್ತೇನೆ' ಎಂದು ತಿಳಿಸಿದ್ದಾರೆ.

ರೆಜಾ ಕಟಾನಿ ಪ್ರಸಿದ್ಧ ಫಿಟ್ನೆಸ್ ಟ್ರೈನರ್ ಆಗಿದ್ದು, ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸೋನಾಕ್ಷಿ ಸಿನ್ಹಾರಂತಹ ಖ್ಯಾತನಾಮರಿಗೆ ತರಬೇತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.