ಶನಿವಾರ, ಡಿಸೆಂಬರ್ 7, 2019
25 °C

ಬಾಲಿವುಡ್ ಪಾರ್ಟಿಗೆ ರಂಗುತಂದ ಹಾಟ್ ಕೇಟಿ

Published:
Updated:
Prajavani

ಒನ್‌ ಪ್ಲಸ್‌ ಮ್ಯೂಸಿಕ್‌ ಫೆಸ್ಟಿವಲ್‌ನಲ್ಲಿ ಹಾಡಲು ಭಾರತಕ್ಕೆ ಬಂದಿಳಿದ ಅಮೆರಿಕದ ಪಾಪ್‌ ಸೆನ್ಸೇಶನ್‌ ಕೇಟಿ ಪೆರಿಯನ್ನು ಬಾಲಿವುಡ್‌ ಅದ್ಧೂರಿಯಾಗಿ ಸ್ವಾಗತಿಸಿದೆ. ಮುಂಬೈನಲ್ಲಿ ಕೇಟಿ ಸ್ವಾಗತಕ್ಕೆ ಕರಣ್‌ ಜೋಹರ್‌ ತಮ್ಮ ಮನೆಯಲ್ಲಿ ನೀಡಿದ ಪಾರ್ಟಿಗೆ ಬಾಲಿವುಡ್‌ ತಾರೆಯರ ದಂಡು ನೆರೆದಿತ್ತು. ಪಾರ್ಟಿಯ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೇಟಿ ಪೆರಿ ಚಿತ್ರ ವನ್ನು ಹಂಚಿಕೊಂಡಿರುವ ನಟಿ ಅನನ್ಯಾ ಪಾಂಡೆ ‘ಹಾಟ್‌ ಆ್ಯಂಡ್‌ ಹಾಟ್‌’ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಅದು ನಿಜ ಕೂಡ!  

ಆಲಿಯಾ ಭಟ್‌, ಜಾಕ್ವೆಲಿನ್‌ ಫರ್ನಾಂಡಿಸ್‌, ಐಶ್ವರ್ಯಾ ರೈ ಬಚ್ಚನ್‌, ಅಭಿಷೇಕ್‌ ಬಚ್ಚನ್‌, ಕಾಜೋಲ್‌, ಮಲೈಕಾ ಅರೋರಾ, ಅನನ್ಯಾ ಪಾಂಡೆ, ಕುನಾಲ್‌ ಖೇಮು ಪಾರ್ಟಿಗೆ ರಂಗು ತಂದರು.

ಏಳು ವರ್ಷದ ನಂತರ ಭಾರತಕ್ಕೆ ಬಂದಿರುವ 35 ವರ್ಷದ ಕೇಟಿ ಮುಂಬೈನಲ್ಲಿ ನಡೆದ ಫ್ರಿನ್ಸ್‌ ಆಫ್‌ ವೇಲ್ಸ್ ಚಾರ್ಲ್ಸ್‌ 71ನೇ ಬರ್ತ್‌ ಡೇ ಪಾರ್ಟಿಯಲ್ಲಿಯೂ ಕಾಣಿಸಿಕೊಂಡರು. ಪಾರ್ಟಿಯಲ್ಲಿ ಚಾರ್ಲ್ಸ್‌, ಮುಕೇಶ್‌ ಅಂಬಾನಿ ಮತ್ತು ಮುಂಬೈ ಉದ್ಯಮಿಗಳ ಜತೆ ಕೇಟಿ ಕಾಣಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು