ಮಂಗಳವಾರ, ಆಗಸ್ಟ್ 16, 2022
20 °C

ಅಮೆಜಾನ್‌ ಪ್ರೈಂನಲ್ಲಿ ಜೂನ್‌ 3ರಿಂದ ಕೆ.ಜಿ.ಎಫ್‌ ಚಾಪ್ಟರ್‌–2

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಕ್ಸ್‌ ಆಫೀಸ್‌ನಲ್ಲಿ ದೂಳೆಬ್ಬಿಸಿದ ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ಕೆ.ಜಿ.ಎಫ್‌ ಚಾಪ್ಟರ್‌–2, ಜೂನ್‌ 3ರಿಂದ ಒಟಿಟಿ ವೇದಿಕೆ ಅಮೆಜಾನ್‌ ಪ್ರೈಂನಲ್ಲಿ ಉಚಿತವಾಗಿ ವೀಕ್ಷಣೆಗೆ ಲಭ್ಯವಾಗಲಿದೆ. 

ಕೆಲವು ದಿನಗಳ ಹಿಂದೆಯೇ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆಯಾಗಿತ್ತು. ಆದರೆ, ಪ್ರೈಂ ಚಂದಾದಾರರಾಗಿದ್ದರೂ ಈ ಸಿನಿಮಾ ವೀಕ್ಷಿಸಲು  ಹಣ ಪಾವತಿಸಬೇಕಿತ್ತು. ಜೂನ್‌ 3ರಿಂದ ಚಂದಾದಾರರು ಉಚಿತವಾಗಿ ಈ ಸಿನಿಮಾ ನೋಡಬಹುದು.

ಕಳೆದ ಏ.14ರಂದು ವಿಶ್ವದ 10 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡಿದ್ದ ಕೆ.ಜಿ.ಎಫ್‌ ಚಾಪ್ಟರ್‌–2 ಭಾರತದಲ್ಲೇ ಮೊದಲ ದಿನ ₹134.5 ಕೋಟಿ ಬಾಚಿತ್ತು. ಕಲೆಕ್ಷನ್‌ ವಿಚಾರದಲ್ಲಿ ವಿಶ್ವವ್ಯಾಪಿ ದಾಖಲೆ ಬರೆದಿರುವ ಈ ಸಿನಿಮಾ, ಇಲ್ಲಿಯವರೆಗೂ ಒಟ್ಟು ₹1,200 ಕೋಟಿ ಬಾಚಿದೆ. ಉತ್ತರ ಭಾರತದಲ್ಲೇ ಈ ಸಿನಿಮಾದ ಕಲೆಕ್ಷನ್‌ ₹430 ಕೋಟಿ ದಾಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು