ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಭಾಗ–2ರ ಚಿತ್ರೀಕರಣ ಮುಕ್ತಾಯಗೊಳ್ಳುತ್ತಾ ಬಂದಿದೆ. ಮುಂದಿನ ವರ್ಷ ಜನವರಿ 14ರಂದು ಮಕರ ಸಂಕ್ರಾಂತಿಯ ದಿನ ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಅವರ ನಿರ್ದೇಶನವಿದೆ. ಶ್ರೀನಿಧಿ ಶೆಟ್ಟಿ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಕ್ಟೋಬರ್ 15ರಿಂದ ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಅವಧಿಯಲ್ಲಿ ‘ದಿಯಾ’, ‘ಶಿವಾಜಿ ಸುರತ್ಕಲ್’, ‘ಶಿವಾರ್ಜುನ’ ಮತ್ತು ‘ಲವ್ ಮಾಕ್‌ಟೇಲ್’ ಚಿತ್ರಗಳನ್ನು ಮತ್ತೆ ಪ್ರದರ್ಶನ ಮಾಡಲು ಚಿತ್ರಮಂದಿರಗಳು ಸಿದ್ಧತೆ ನಡೆಸಿವೆ. ಈ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನೋಭಾವ ಅರಿಯುವ ಪ್ರಯತ್ನ ನಡೆದಿದೆ.

ಕೊರೊನಾ ಸೋಂಕಿನ ಆತಂಕದ ಮಧ್ಯೆ ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಾರೆಯೇ ಇಲ್ಲವೇ ಎಂಬುದನ್ನೂ ಈ ಪ್ರಯೋಗದ ಮೂಲಕ ಅರಿಯಬಹುದು ಎಂಬುದು ಸಿನಿಮಾ ಕ್ಷೇತ್ರದವರ ಲೆಕ್ಕಾಚಾರ.

ಕೆಜಿಎಫ್ ಭಾಗ 2ರನ್ನು ದಸರಾ ಅವಧಿಗೆ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಲಾಕ್‌ಡೌನ್ ಕಾರಣಕ್ಕೆ ಆ ದಿನಾಂಕವನ್ನು ಮುಂದೂಡಲಾಯಿತು. ಈಗ ಜನವರಿ 14ಕ್ಕೆ ಚಿತ್ರ ಬಿಡುಗಡೆ ಮಾಡಲು ತಂಡ ಉತ್ಸುಕವಾಗಿದೆ. ಆ ವೇಳೆಗೆ ಕೊರೊನಾ ಆತಂಕ ತಿಳಿಯಾಗಬಹುದು ಎಂಬುದು ತಂಡದ ನಿರೀಕ್ಷೆ.

ಕೆಜಿಎಫ್ ಭಾಗ –2ರ ಚಿತ್ರೀಕರಣ ಮಂಗಳೂರು, ಮಲ್ಪೆ ಬೀಚ್‌ನಲ್ಲಿ ನಡೆಯುತ್ತಿದೆ. ಶ್ರೀನಿಧಿ ಅವರು ಕರಾವಳಿ ಭಾಗದ ಚಿತ್ರೀಕರಣದ ವೇಳೆ ತಂಡವನ್ನು ಸೇರಿಕೊಂಡಿದ್ದಾರೆ. ಕೆಲವು ಸನ್ನಿವೇಶಗಳನ್ನು ಮೈಸೂರಿನಲ್ಲೂ ಚಿತ್ರೀಕರಿಸಲಾಗುವುದು ಎಂದು ಚಿತ್ರ ತಂಡದ ಮೂಲಗಳು ಹೇಳಿವೆ.

ಕೆಜಿಎಫ್ ಭಾಗ 2ರಲ್ಲಿ ನಟ ಪ್ರಕಾಶ್ ರೈ ಪ್ರಧಾನಪಾತ್ರದಲ್ಲಿದ್ದಾರೆ. ಸಂಜಯ್ ದತ್ ಅವರು ‘ಅಧೀರ’ನ ಪಾತ್ರದಲ್ಲಿದ್ದಾರೆ. ರವೀನಾ ಟಂಡನ್ ಅವರು ರಮಿಕಾ ಸೇನ್ ಆಗಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತ ಇದೆ. ಭುವನ್ ಗೌಡ ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.