ಶನಿವಾರ, ಸೆಪ್ಟೆಂಬರ್ 18, 2021
30 °C

ರಾಮ್‌ ಚರಣ್‌ಗೆ ಜೋಡಿಯಾಗಲಿರುವ ಕಿಯಾರ ಅಡ್ವಾಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

 ಹೈದರಾಬಾದ್‌:  29ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಿಯಾರ ಅಡ್ವಾಣಿಗೆ ಖ್ಯಾತ ನಿರ್ದೇಶಕ ಶಂಕರ್‌ ಸಿಹಿ ಸುದ್ದಿ ಕೊಟ್ಟಿದ್ದಾರೆ.

ರಾಮ್‌ ಚರಣ್‌ ನಾಯಕರಾಗಲಿರುವ ಹೊಸ ಚಿತ್ರಕ್ಕೆ ಶಂಕರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ನಾಯಕಿಯಾಗಿ ಕಿಯಾರ ಅಡ್ವಾಣಿ ಆಯ್ಕೆಯಾಗಿದ್ದಾರೆ ಎಂದು ವೆಂಕಟೇಶ್ವರ ಕ್ರಿಯೇಷನ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ಟ್ವೀಟ್‌ ಮೂಲಕ ತಿಳಿಸಿದೆ.

'ಇದು ನನಗೆ ಸಿಕ್ಕ ಅತ್ಯುತ್ತಮ ಬರ್ತಡೇ ಗಿಫ್ಟ್‌ಗಳಲ್ಲಿ ಒಂದು. ಇದರಲ್ಲಿ ನಾನು ನಟಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣದ ಆರಂಭಕ್ಕಾಗಿ ಕಾಯುತ್ತಿರುವೆ ಎಂದು ಕಿಯಾರ ಹೇಳಿದ್ದಾರೆ. 

ಕಿಯಾರಾ ಅಡ್ವಾಣಿ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು 'ಭರತ್ ಅನೇ ನೇನು' ಚಿತ್ರದ ಮೂಲಕ. ಇದರಲ್ಲಿ ಪ್ರಿನ್ಸ್ ಮಹೇಶ್ ಬಾಬುಗೆ ಜೋಡಿಯಾಗಿ ಅಭಿನಯಿಸಿದ್ದರು. ಈ ಚಿತ್ರ ಬಾಕ್ಸ್‌ ಆಫೀಸ್ ಹಿಟ್‌ ಆಗಿತ್ತು.

ಇದನ್ನು ಓದಿ: ಚಿತ್ರ ನೋಡಿ: ಹಳದಿ ಬಿಕಿನಿಯಲ್ಲಿ ಹೊಳೆಯುತ್ತಿರುವ ಕಿಯಾರ ಅಡ್ವಾಣಿ

ರಾಮ್ ಚರಣ್‌ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ಎರಡನೇ ಸಲವಾಗಿದೆ. ವಿನಯ ವಿದೇಯ ರಾಮ ಸಿನಿಮಾದಲ್ಲಿ ಕಿಯಾರ ನಟಿಸಿದ್ದರು. ಬೋಯಪಾಟಿ ಶ್ರೀನು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ಇದನ್ನೂ ಓದಿ: ಮಹಿಳಾ ಪ್ರಧಾನ ಚಿತ್ರದಲ್ಲಿ ಕಿಯಾರಾ ಅಡ್ವಾಣಿ

ಟಾಲಿವುಡ್‌ ಸೇರಿದಂತೆ ಕಿಯಾರ್‌ ಬಾಲಿವುಡ್‌ನಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಈಗ ಅವರ ಕೈಯಲ್ಲಿ ಐದು ಸಿನಿಮಾಗಳಿವೆ. ಕಿಯಾರ ಅವರ 29ನೇ ವರ್ಷದ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಸೇರಿದಂತೆ ಟಾಲಿವುಡ್‌ ಹಾಗೂ ಬಾಲಿವುಡ್‌ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು