ಬಿಗ್ಬಾಸ್ 9ನೇ ಸೀಸನ್ ವಿಜೇತರಾಗಿರುವ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಜೈ’ ಚಿತ್ರ ಇಂದು ತುಳು ಮತ್ತು ಕನ್ನಡ ಭಾಷೆಯಲ್ಲಿ ವಿಶ್ವದಾದ್ಯಂತ ತೆರೆ ಕಾಣಲಿದೆ. ಈ ನಡುವೆ ಸಿನಿಮಾದ ಮೊದಲ ಟಿಕೆಟ್ ಅನ್ನು ನಟ ಕಿಚ್ಚ ಸುದೀಪ್ ಅವರು ಖರೀದಿಸಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಜೈ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
.ನಟ ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಚಿತ್ರಕ್ಕೆ ಕೆ .ಎಲ್. ರಾಹುಲ್ ಶುಭಹಾರೈಕೆ.ಕಾಲು ಎಳೆಯೊದಲ್ಲ, ಕಾಲು ಹಿಡಿಯೋದು ನಮ್ಮ ಸಂಸ್ಕೃತಿ: ನಟ ಸುನೀಲ್ ಶೆಟ್ಟಿ .
ತುಳು ಮತ್ತು ಕನ್ನಡದಲ್ಲಿ ರೂಪುಗೊಂಡಿರುವ ಈ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸಿರೋದು ವಿಶೇಷ. ಸಂಚಲನ ಸೃಷ್ಟಿಸಿರೋ ಜೈ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್ ನೀಡಿದ್ದು ಚಿತ್ರತಂಡಕ್ಕೆ ಖುಷಿ ತಂದುಕೊಟ್ಟಿದೆ.

ಇನ್ನು, ಈ ಬಗ್ಗೆ ನಟ ರೂಪೇಶ್ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರೂಪೇಶ್ ಶೆಟ್ಟಿ ನಮ್ಮ ಸಿನಿಮಾದ ಮೊದಲ ಟಿಕೆಟ್ ಇದು. ನನಗೊಂದು ಆಸೆ ಇತ್ತು. ನಮ್ಮ ಸುದೀಪ್ ಅಣ್ಣನಿಂದ ಏನಾದರೂ ಬೆಂಬಲ ಬೇಕಾಗಿತ್ತು. ನಮ್ಮ ಸಿನಿಮಾದ ಮೊದಲ ಟಿಕೆಟ್ ಅನ್ನು ಸುದೀಪ್ ಸರ್ಗೆ ಕೊಡ್ತಾ ಇದ್ದೀನಿ’ ಎಂದರು. ಆ ಕೂಡಲೇ ಸುದೀಪ್ ಅವರು ₹501 ರೂಪಾಯಿಯನ್ನು ಕೊಟ್ಟು ಟಿಕೆಟ್ ಖರೀದಿಸಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ಗಿರಿಗಿಟ್, ಗಮ್ಜಾಲ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಮತ್ತೊಂದು ಬಿಗ್ ಬಜೆಟ್ನ ಸಿನಿಮಾ ನಿರ್ಮಿಸಿದ್ದಾರೆ. ಜೈ ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿದೆ. ಜೈ ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ, ಸುನೀಲ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮನೋಜ್ ಚೇತನ್ ಡಿ ಸೋಜ ಇನ್ನಿತರರು ಅಭಿನಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.