ರೂಪೇಶ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಜೈ’ ಚಿತ್ರ ಕುರಿತು ಕ್ರಿಕೆಟಿಗ ಕೆ .ಎಲ್. ರಾಹುಲ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರ ಕುರಿತು ಮಾತನಾಡಿರುವ ಕೆ .ಎಲ್. ರಾಹುಲ್, ‘ನಮಸ್ಕಾರ, ‘ಜೈ’ ಸಿನಿಮಾದ ಟ್ರೇಲರ್ ಅನ್ನು ನಾನು ವೀಕ್ಷಿಸಿದೆ. ಚಿತ್ರಕಥೆ ತುಂಬಾ ಚೆನ್ನಾಗಿದೆ. ಎಲ್ಲರೂ ದಯಮಾಡಿ ಈ ಚಿತ್ರವನ್ನು ನೋಡಿ ನಮ್ಮ ಊರಿನ ಕಲಾವಿದರನ್ನು ಪ್ರೋತ್ಸಾಹಿಸಿ. ರೂಪೇಶ್ ಹಾಗೂ ಅವರ ತಂಡಕ್ಕೆ ಶುಭ ಹಾರೈಸುತ್ತೇನೆ’ ಎಂದಿದ್ದಾರೆ.

ಇನ್ನೂ ವಿಶೇಷ ಅಂದರೆ ಈ ಚಿತ್ರದ ಪಾತ್ರ ಒಂದರಲ್ಲಿ ಕೆ .ಎಲ್. ರಾಹುಲ್ ಮಾವ ಸುನೀಲ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.
.ಪಂಜಾಬಿ ಡೋಲ್ ನಾದಕ್ಕೆ ಹೆಜ್ಜೆ ಹಾಕಿದ ಸುಧಾ ಮೂರ್ತಿ, ಕಿರಣ್ ಮಜುಂದಾರ್.
ಕೆಲ ದಿನಗಳ ಹಿಂದೆ ಈ ಚಿತ್ರದ ಟ್ರೇಲರ್ ಅನ್ನು ಬೆಂಗಳೂರಿನ ಮಾಲ್ ಒಂದರಲ್ಲಿ ಸುನೀಲ್ ಶೆಟ್ಟಿ ಬಿಡುಗಡೆ ಮಾಡಿದ್ದರು. ಟ್ರೇಲರ್ ಬಿಡುಗಡೆ ಬಳಿಕ ‘ಪಿಲಿನಲಿಕೆ’ ವಾದ್ಯಕ್ಕೆ ಇವರು ಹೆಜ್ಜೆ ಹಾಕಿದ್ದರು. ನವೆಂಬರ್ 14ರಂದು ಈ ಚಿತ್ರ ಬಿಡುಗಡೆಯಾಗಲಿದೆ.

ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ನಟಿ ಅದ್ವಿತಿ ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ‘ಲವ್ ಯು’ ಹಾಡು ಪ್ರೇಕ್ಷಕರ ಗಮನ ಸೆಳೆದಿದೆ.

ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗೋಡಿ, ಮಂಜುನಾಥ ಅತ್ತಾವರ, ಹಾಗೂ ದೀಕ್ಷಿತ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.