ಸೋಮವಾರ, ಸೆಪ್ಟೆಂಬರ್ 26, 2022
22 °C

ಕಿಚ್ಚನ ಬದುಕಿಗೆ 49ರ ಸಂಭ್ರಮ; ಅಭಿಮಾನಿಗಳ ಸಡಗರ, ಶುಭಾಶಯಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಕಿಟ್ಟ ಸುದೀಪ್‌ ಅವರಿಗೆ ಸೆ. 2ರಂದು 49ರ ಹರೆಯದ ಸಂಭ್ರಮ. ಜೊತೆಗೆ ಅವರ ಅಭಿನಯದ ‘ವಿಕ್ರಾಂತ್‌ ರೋಣ’ ಇಂದು ಜೀ 5ನಲ್ಲಿ ಬಿಡುಗಡೆಯಾಗಿದೆ. ಅಭಿಮಾನಿಗಳು ಸುದೀಪ್‌ ಅವರಿಗೆ ಶುಭಾಶಯಗಳ ಮಳೆಗರೆದಿದ್ದಾರೆ. ನಾಡು ಮಾತ್ರವಲ್ಲ ವಿದೇಶಗಳಲ್ಲೂ ಕಿಚ್ಚನ ಅಭಿಮಾನಿಗಳು ಸಂಭ್ರಮ ಆಚರಿಸಿದ್ದಾರೆ. ಕಿಚ್ಚ ಅವರ ಹೊಸ, ಹಳೇಯ ಚಿತ್ರಗಳ ಪೋಸ್ಟರ್‌ಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಕಿಚ್ಚನ ಮೇಲೆ ಹೂಮಳೆಗರೆದ ವಿಡಿಯೋಗಳು, ಸಂಭ್ರಮದ ರೀಲ್‌ಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

ಸೆ 1ರ ಮಧ್ಯರಾತ್ರಿ ವೇಳೆಯೇ ಅಭಿಮಾನಿಗಳು ಸುದೀಪ್‌ ಮನೆ ಮುಂದೆ ಜಮಾಯಿಸಿ ಕೇಕ್‌ ಕತ್ತರಿಸಿ ಶುಭಕೋರಿದರು.  ಮನೆಯ ಆವರಣದಲ್ಲಿ ಪುಟ್ಟ ಪೆಂಡಾಲ್‌ ಅಡಿ ಅಭಿಮಾನಿಗಳ ಜೊತೆ ಸೇರಿದ ಸುದೀಪ್‌ ತಾವೂ ಸಂಭ್ರಮಿಸಿದರು. ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಗದ್ದಲವಾಗದಂತೆ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. 

ಇದನ್ನೂ ಓದಿ: 

ರಾರಾಜಿಸಿದ ರಾ ರಾ ರಕ್ಕಮ್ಮ...

ಸುದೀಪ್‌ ಅಭಿನಯದ ಇತ್ತೀಚಿನ ಚಿತ್ರ ‘ವಿಕ್ರಾಂತ್‌ ರೋಣ’ದ ರಾ ರಾ ರಕ್ಕಮ್ಮ ಹಾಡಿಗೆ ಅಭಿಮಾನಿಗಳು ಹೆಜ್ಜೆ ಹಾಕಿದರು. ಇದೇ ವೇಳೆ ಉಪೇಂದ್ರ ಜೊತೆ ಅವರ ಅಭಿನಯದ ‘ಕಬ್ಚ’ ಚಿತ್ರದ ಪೋಸ್ಟರ್‌ನ್ನು ಅಭಿಮಾನಿಗಳು ಹಂಚಿಕೊಂಡಿದ್ದು, ಆ ಚಿತ್ರದಲ್ಲಿನ ಭಾರ್ಗವ್‌ ಬಕ್ಷಿ ಪಾತ್ರದ ಹೆಸರು ಉಲ್ಲೇಖಿಸಿ ಶುಭ ಕೋರಿದ್ದಾರೆ. ಹೀಗೆ ಚಲನಚಿತ್ರ, ರಾಜಕೀಯ, ಉದ್ಯಮ ಕ್ಷೇತ್ರದ ಗಣ್ಯರು ಹಾಗೂ ಯುವ ಜನರು ಸುದೀಪ್‌ ಅವರಿಗೆ ಶುಭ ಕೋರುತ್ತಿದ್ದಾರೆ. 

ಒಡಿಶಾದ ಕಡಲ ತೀರದಲ್ಲಿ ಮಾನಸ ಕುಮಾರ್‌ ಎಂಬ ಮರಳು ಶಿಲ್ಪ ಕಲಾವಿದ ಸುದೀಪ್‌ ಅವರ ಮರಳು ಶಿಲ್ಪ ರಚಿಸಿ ಶುಭ ಕೋರಿದ್ದಾರೆ. ಚಿತ್ರರಂಗದಲ್ಲಿ 25 ವರ್ಷಗಳ ಸಾಧನೆಗಾಗಿ ಅಂಚೆ ಇಲಾಖೆಯು ಸುದೀಪ್‌ ಹೆಸರಿನ ಅಂಚೆ ಚೀಟಿ ಬಿಡುಗಡೆಗೂ ಸಿದ್ಧತೆ ನಡೆಸಿದೆ. ಇತ್ತೀಚೆಗಷ್ಟೇ ಅಂಚೆ ಇಲಾಖೆ ಅಧೀಕ್ಷಕ ಮಾದೇಶ್‌ ಅವರು ಅಂಚೆ ಚೀಟಿ ಬಿಡುಗಡೆಗೆ ಸುದೀಪ್‌ ಅವರ ಒಪ್ಪಿಗೆ ಪಡೆದಿದ್ದಾರೆ ಮತ್ತು ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. 

1977ರಲ್ಲಿ ‘ತಾಯವ್ವ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅವರು 2001ರಲ್ಲಿ ಸ್ಪರ್ಶ ಚಿತ್ರದಲ್ಲಿ ತಮ್ಮದೇ ಹೆಸರಿನ ಪಾತ್ರದ ಮೂಲಕ ನಾಯಕನಾಗಿ ಛಾಪು ಮೂಡಿಸಿದರು. ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿ ಒಟ್ಟು 66 ಚಿತ್ರಗಳಲ್ಲಿ ಸುದೀಪ್‌ ಅಭಿನಯಿಸಿದ್ದಾರೆ. ಜನಪ್ರಿಯ ಬಿಗ್‌ಬಾಸ್‌ ಕಾರ್ಯಕ್ರಮದ ನಿರೂಪಕರಾಗಿಯೂ ಅವರು ಕಾಣಿಸಿಕೊಂಡಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು