ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Kichcha46 Demon War Begins: ಕಿಚ್ಚ ಸುದೀಪ್ ಹೊಸ ಸಿನಿಮಾದ ಟೀಸರ್ ಬಿಡುಗಡೆ

Published 2 ಜುಲೈ 2023, 8:58 IST
Last Updated 2 ಜುಲೈ 2023, 8:58 IST
ಅಕ್ಷರ ಗಾತ್ರ

ನಟ ಕಿಚ್ಚ ಸುದೀಪ್‌ ತಮ್ಮ ಮುಂದಿನ ಸಿನಿಮಾಕ್ಕಾಗಿ ರಾಕ್ಷಸನ ಅವತಾರ ತಾಳಿದ್ದಾರೆ. ಸುದೀಪ್‌ ಅವರ 46ನೇ ಸಿನಿಮಾದ ಟೀಸರ್‌ ಬಿಡುಗಡೆಗೊಂಡಿದೆ. ತಮ್ಮ ಮುಂದಿನ ಸಿನಿಮಾಗಾಗಿ ‘ಕಬಾಲಿ’, ‘ಕರ್ಣನ್’, 'ಅಸುರನ್‌’ ಮೊದಲಾದ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ತಮಿಳಿನ ಕಲೈಪುಲಿ ಎಸ್‌ ಧಾನು ಜೊತೆ ಕೈಜೋಡಿಸಿದ್ದಾರೆ. 

ಧಾನು ಅವರ ವಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಕ್ಕೆ ವಿಜಯ್ ಕಾರ್ತಿಕೇಯ ಎಂಬ ಹೊಸ ನಿರ್ದೇಶಕ  ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. 

ಗುಂಡೇಟು ತಗುಲಿದ ರಕ್ತ ಸಿಕ್ತ ದೇಹ, ಗಾಜಿನ ಲೋಟದಲ್ಲಿ ಬಸಿಯುವ ರಕ್ತ, ಕೈಯಲ್ಲಿ ಬಂದೂಕು, ತುಂಡಾಗಿ ಬಿದ್ದಿರುವ ಖಳನಟರ ದೇಹದ ದೃಶ್ಯಗಳು ಟೀಸರ್‌ನಲ್ಲಿವೆ. ‘ನಾನು ಯುದ್ಧಕ್ಕೆ ಇಳಿದ ಮೇಲೆ ದಯೆ, ಕ್ಷಮೆ, ಸಂಧಾನ ಇದು ಯಾವುದೂ ಇರುವುದಿಲ್ಲ. ನಾನು ಮನುಷ್ಯ ಅಲ್ಲ. ನಾನು ರಾಕ್ಷಸ..’ ಎಂದು ಸುದೀಪ್‌ ಟೀಸರ್‌ನಲ್ಲಿ ಹೇಳುತ್ತಾರೆ. ಶೀರ್ಷಿಕೆಯನ್ನು ಬಿಟ್ಟುಕೊಡದ ಚಿತ್ರದ ಪೋಸ್ಟರ್‌ನಲ್ಲಿ ಕೂಡ ‘ರಾಕ್ಷಸ ಯುದ್ಧ ಪ್ರಾರಂಭ’ ಎಂಬ ಅಡಿಬರಹವಿದೆ. ಒಟ್ಟಿನಲ್ಲಿ ಕಿಚ್ಚ ತಮ್ಮ ಮುಂದಿನ ಸಿನಿಮಾದಲ್ಲಿ ರಾಕ್ಷಸ ಅವತಾರವೆತ್ತಿರುವುದು ಟೀಸರ್‌ನಿಂದ ಗೊತ್ತಾಗುತ್ತಿದೆ. 

‘ವಿಕ್ರಾಂತ್ ರೋಣ’ ಚಿತ್ರಕ್ಕೆ ಹಿಟ್ ಹಾಡುಗಳನ್ನು ನೀಡಿದ್ದ ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ಶೇಖರ್ ಚಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಕನ್ನಡ, ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ.

Kichcha46 Demon War Begins: ಕಿಚ್ಚ ಸುದೀಪ್ ಹೊಸ ಸಿನಿಮಾದ ಟೀಸರ್ ಬಿಡುಗಡೆ
Venugopala K.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT