ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಿಲ್​ ಶರ್ಮಾ ಶೋನಲ್ಲಿ ಪಾಲ್ಗೊಂಡ ಕನ್ನಡ ನಟ​ ಕಿಚ್ಚ ಸುದೀಪ್​

Last Updated 4 ಫೆಬ್ರುವರಿ 2019, 2:54 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಹಾಸ್ಯನಟ ಕಪಿಲ್‌ ಶರ್ಮಾ ಅವರು ನಡೆಸಿ ಕೊಡುವ ಜನಪ್ರಿಯ ಕಾಮಿಡಿ ಕಾರ್ಯಕ್ರಮ ‘ದಿಕಪಿಲ್ ಶರ್ಮಾಶೋ’ನಲ್ಲಿ ನಟ ಕಿಚ್ಚ ಸುದೀಪ್‌ ಭಾಗವಹಿಸಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳು ವೈರಲ್‌ ಆಗಿದ್ದು, ಈ ಕುರಿತು ಸುದೀಪ್‌ ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

‘ಕಪಿಲ್​ ಶರ್ಮಾ ಶೋನಲ್ಲಿ ಅದ್ಭುತವಾದ ಸಂತೋಷದ ಕ್ಷಣಗಳನ್ನು ಕಳೆದೆ. ಅಲ್ಲಿ ಎಷ್ಟು ನಕ್ಕಿದ್ದೇನೆಂದುಹೇಳಲು ಸಾಧ್ಯವಿಲ್ಲ. ಈ ಮಟ್ಟಿಗೆ ನಾನು ಇದುವರೆಗೆ ನಕ್ಕಿದ್ದು ತೀರ ವಿರಳ.ಶರ್ಮಾ ತಂಡಕ್ಕೆ ಧನ್ಯವಾದ’ ಎಂದು ಟ್ವೀಟ್​ ಮಾಡಿದ್ದಾರೆ. ಜತೆಗೆ, ಕಾರ್ಯಕ್ರಮದಲ್ಲಿದ್ದ ನವಜೋತ್​ ಸಿಂಗ್​ ಸಿಧು, ಸುನೀಲ್​ ಶೆಟ್ಟಿ, ಕಪಿಲ್​ ಶರ್ಮಾ ಇತರರೊಂದಿಗಿನ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT