ಪ್ರಸಿದ್ಧ ಗಾಯಕ ಕೆ.ಜೆ.ಯೇಸುದಾಸ್ ಅವರು ಇಂದು (ಜ.10) 82ನೇ ಜನ್ಮದಿನಕ್ಕೆ ಕಾಲಿಟ್ಟಿದ್ದಾರೆ.

ದೇಶದೆಲ್ಲಡೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಯೇಸುದಾಸ್ ಅವರಿಗೆ ಗಣ್ಯರು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಯೇಸುದಾಸ್ 1961ರ ನವೆಂಬರ್ 14ರಂದು ಮಲಯಾಳಂ ಸಿನಿಮಾ`ಕಲಪ್ಪಡುಕಲ್‘ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಹಿನ್ನೆಲೆ ಗಾಯಕರಾಗಿ ಹಾಡುವ ಮೂಲಕ ಮುಖ್ಯವಾಹಿನಿಗೆ ಬಂದರು. ಸಮಾಜ ಸುಧಾರಕ ನಾರಾಯಣ ಗುರು ಅವರನ್ನು ಭಜಿಸುವ ನಾಲ್ಕು ಸಾಲುಗಳ ಗೀತೆಯಿಂದ ಆರಂಭಗೊಂಡ ಅಂದಿನ ಅವರ ಈ ಗಾನಸುಧೆ ಮಾಗಿದ ಮಾಧುರ್ಯದಲ್ಲಿ ಇಂದಿಗೂ ಮುಂದುವರಿದಿದೆ.

82 ವರ್ಷದ ಯೇಸುದಾಸ್ ಕನ್ನಡ, ತೆಲುಗು ,ತಮಿಳು, ಮಲಯಾಳ, ಹಿಂದಿ, ಬೆಂಗಾಲಿ, ಗುಜರಾತಿ, ಒಡಿಶಾ, ಮರಾಠಿ, ಪಂಜಾಬಿ, ಸಂಸ್ಕೃತ, ತುಳು ಮತ್ತು ವಿದೇಶಿ ಭಾಷೆಗಳಾದ ರಷ್ಯನ್, ಅರೇಬಿಕ್, ಲ್ಯಾಟಿನ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ಹಾಡಿದ್ದಾರೆ.

ಮಲಯ ಮಾರುತ, ಮಲ್ಲಿಗೆ ಹೂವೇ, ಹೊಸ ಜೀವನ, ರಾಮಾಚಾರಿ, ಸಿಪಾಯಿ, ಪ್ರೀತ್ಸೋದ್ ತಪ್ಪಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಯೇಸುದಾಸ್ ಹಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.