ಸೋಮವಾರ, ಆಗಸ್ಟ್ 8, 2022
25 °C

ಪೋಲ್ಯಾಂಡ್‌ನಲ್ಲಿ ‘ಕ್ರಾಂತಿ‘: ರೊಮ್ಯಾಂಟಿಕ್‌ ಮೂಡ್‌ನಲ್ಲಿ ದರ್ಶನ್‌, ರಚಿತಾ ರಾಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಬಹುನಿರೀಕ್ಷಿತ 55ನೇ ಸಿನಿಮಾ ‘ಕ್ರಾಂತಿ’. ಈ ಚಿತ್ರದ ಶೂಟಿಂಗ್‌ಗಾಗಿ ಸಿನಿಮಾ ತಂಡ ಪೋಲ್ಯಾಂಡ್‌ಗೆ ಹೋಗಿದೆ.

ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಟ್ವೀಟ್‌ ಮಾಡಿದೆ. ಪೋಲ್ಯಾಂಡ್‌ನಲ್ಲಿ ಒಂದು ರೊಮ್ಯಾಂಟಿಕ್‌ ಹಾಡು ಹಾಗೂ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುವುದು ಎಂದು ಸಿನಿಮಾ ತಂಡ ಹೇಳಿದೆ. 

ಎರಡು ತಂಡಗಳಲ್ಲಿ ಚಿತ್ರತಂಡ ಪೋಲ್ಯಾಂಡ್‌ಗೆ ಹೋಗಿದೆ. ಖಾಸಗಿ ಜೆಟ್‌ನಲ್ಲಿ ದರ್ಶನ್‌, ರಚಿತಾ ಹಾಗೂ ನಿರ್ಮಾಪಕಿ ಶೈಲಜಾ ನಾಗ್‌ ಹೋಗಿದ್ದಾರೆ. ಮತ್ತೊಂದು ವಿಮಾನದಲ್ಲಿ ಹರಿಕೃಷ್ಣ ಹಾಗೂ ತಂಡದವರು ತೆರಳಿದ್ದಾರೆ. ಕೆಲವು ದಿನಗಳವರೆಗೆ ಚಿತ್ರತಂಡ ಅಲ್ಲಿಯೇ ಇರಲಿದೆ. 

2019ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದ ‘ಯಜಮಾನ’ ಚಿತ್ರತಂಡವು ‘ಕ್ರಾಂತಿ’ ಸಿನಿಮಾದ ಮೂಲಕ ಇದೀಗ ಮತ್ತೆ ಒಂದಾಗಿದೆ. ಸಿನಿಮಾವನ್ನು ಶೈಲಜಾ ನಾಗ್‌ ಹಾಗೂ ಬಿ.ಸುರೇಶ್‌ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ನಿರ್ದೇಶಿಸಲಿದ್ದಾರೆ. ಮೀಡಿಯಾ ಹೌಸ್‌ ಸ್ಟುಡಿಯೋ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಓದಿ... 

ಸಿಂಪಲ್‌ ಸೀರೆಯಲ್ಲಿ ಗಮನ ಸೆಳೆದ ಸಾಯಿ ಪಲ್ಲವಿ: ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ 

ಹಾಟ್ ಫೋಟೊ ಹಂಚಿಕೊಂಡ ಮಾಳವಿಕಾ ಮೋಹನನ್: ಅಭಿಮಾನಿಗಳಿಂದ ಭಾರಿ ಮೆಚ್ಚುಗೆ

ಸಿದ್ಧಾರ್ಥ್ ಮಲ್ಹೋತ್ರಾ ಜತೆ ಬ್ರೇಕಪ್: ಮೌನ ಮುರಿದ ಕಿಯಾರಾ ಅಡ್ವಾಣಿ ಹೇಳಿದ್ದೇನು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು