ಶುಕ್ರವಾರ, ಜೂನ್ 18, 2021
21 °C

ಅಮೀರ್‌ ನಟನೆಯ ಲಾಲ್‌ ಸಿಂಗ್‌ ಚಡ್ಡಾ ಚಿತ್ರದ ಫಸ್ಟ್‌ ಲುಕ್‌ಗೆ ಪ್ರಶಂಸೆಯ ಸುರಿಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನ ಮಿಸ್ಟರ್‌ ಪರ್‌ಫೆಕ್ಷನಿಷ್ಟ್‌ ಅಮೀರ್‌ ಖಾನ್‌ ಅವರು ನಟಿಸುತ್ತಿರುವ ಲಾಲ್‌ ಸಿಂಗ್‌ ಚಡ್ಡಾ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದ ಫಸ್ಟ್‌ ಲುಕ್‌ ಅನ್ನು ಅಮೀರ್‌ ಖಾನ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಲಾಲ್‌ ಸಿಂಗ್‌ ಚಡ್ಡಾ ಹಾಲಿವುಡ್‌ನ ‘ಫಾರೆಸ್ಟ್‌ ಗಂಪ್‌‘ ಚಿತ್ರದ ರಿಮೇಕ್‌ ಆಗಿದ್ದು, ಅಮೀರ್‌ ಅವರೊಂದಿಗೆ ಕರೀನಾ ಕಪೂರ್‌ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್ ಹಂಚಿಕೊಂಡಿರುವ ಅಮೀರ್‌ ಖಾನ್‌ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. 

ಪೋಸ್ಟರ್‌ನಲ್ಲಿ ದಪ್ಪ ಮೀಸೆ, ಉದ್ದನೆಯ ಗಡ್ಡ ಹೊಂದಿರುವ ಅಮೀರ್ ಗುಲಾಬಿ ಬಣ್ಣದ ಅಂಗಿ, ಬೂದು ಬಣ್ಣದ ಪ್ಯಾಂಟ್‌ ಮತ್ತು ಗುಲಾಬಿ ಪೇಟವನ್ನು ಧರಿಸಿದ್ದಾರೆ. ಆ ಮೂಲಕ ಸಿಖ್‌ ಸಮುದಾಯಕ್ಕೆ ಸೇರಿದ ಲಾಲ್ ಸಿಂಗ್‌ ಚಡ್ಡಾ ಪಾತ್ರದ ಮೊದಲ ಲುಕ್‌ನಲ್ಲೇ ಸೈ  ಎನಿಸಿಕೊಂಡಿದ್ದಾರೆ.  ಲಾಲ್‌ ಸಿಂಗ್ ಚಡ್ಡಾದ ಮೊದಲ ಪೋಸ್ಟರ್‌ ಅಮೀರ್‌ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಚಿತ್ರವು ಮುಂದಿನ ವರ್ಷದ ಡಿಸೆಂಬರ್‌ ತಿಂಗಳಲ್ಲಿ ತೆರೆಕಾಣಲಿದ್ದು, ಅದ್ವೈತ್‌ ಚಂದನ್‌ ನಿರ್ದೇಶನ ಮಾಡಲಿದ್ದಾರೆ. ಬಾಲಿವುಡ್‌ನ ಮತ್ತೊಬ್ಬ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದ ಮೂಲಕ ತೆರೆಯ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು