ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಲ್ಮಾನ್‌ ರಾತ್ರಿ 12 ಗಂಟೆಯ ನಂತರ ಫೋನ್ ಮಾಡುತ್ತಾರೆ: ಲಾರಾ ದತ್ತಾ ಹೇಳಿದ್ದೇನು?

Published : 18 ಜನವರಿ 2022, 6:45 IST
ಫಾಲೋ ಮಾಡಿ
Comments

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮಧ್ಯರಾತ್ರಿ 12 ಗಂಟೆಯ ನಂತರ ನನಗೆ ದೂರವಾಣಿ ಕರೆ ಮಾಡುತ್ತಾರೆ ಎಂದು ನಟಿ ಲಾರಾ ದತ್ತಾ ಹೇಳಿಕೊಂಡಿದ್ದಾರೆ.

ಲಾರಾ ದತ್ತಾ ಅವರು ಸಲ್ಮಾನ್‌ ಖಾನ್‌ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಲಾರಾ, ಸಲ್ಮಾನ್‌ ಖಾನ್‌, ಅಕ್ಷಯ್ ಕುಮಾರ್, ಸಂಜಯ್ ದತ್ ಕುರಿತಾದ ಅಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಸಲ್ಮಾನ್ ಮಧ್ಯರಾತ್ರಿ 12 ಗಂಟೆ ನಂತರ ನನಗೆ ಕರೆ ಮಾಡುತ್ತಾರೆ. ಅವರು ಆ ಸಮಯದಲ್ಲಿ ಮಾತ್ರ ಎಚ್ಚರಗೊಂಡಿರುತ್ತಾರೆ. ನಾನು ಅವರ ಕರೆಗಳನ್ನು ಸ್ವೀಕರಿಸುವ ಸಮಯ ಅದು’ ಎಂದು ಲಾರಾ ಹೇಳಿದ್ದಾರೆ.

2005ರಲ್ಲಿ ತೆರೆಕಂಡ ‘ನೋ ಎಂಟ್ರಿ’ ಚಿತ್ರದಲ್ಲಿ ಸಲ್ಮಾನ್‌ಗೆ ಜೋಡಿಯಾಗಿ ಲಾರಾ ಕಾಣಿಸಿಕೊಂಡಿದ್ದರು.

‘ಬೆಲ್ ಬಾಟಮ್’ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಲಾರಾ, ತಮ್ಮ ಅದ್ಭುತ ನಟನೆಯ ಮೂಲಕ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಪಾತ್ರರಾಗಿದ್ದರು. ಈ ಚಿತ್ರ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಕ್ಷಯ್‌ ಕುಮಾರ್‌ ಕುರಿತು ಮಾತನಾಡಿರುವ ಲಾರಾ, ‘ತಮ್ಮ ಜೀವನದಲ್ಲಿ ಬೇರೆಯವರು ಎಚ್ಚರಗೊಳ್ಳುವ ಮೊದಲು ಅವರು ಎಚ್ಚರಗೊಂಡಿರುತ್ತಾರೆ’ ಎಂದು ಹೇಳಿದ್ದಾರೆ.

ಲಾರಾ 2003ರಲ್ಲಿ ತೆರೆಕಂಡ ‘ಅಂದಾಜ್‌’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.

ಸಂಜಯ್ ದತ್ ಬಗ್ಗೆ ಮಾತನಾಡಿದ ಲಾರಾ, ‘ಸಂಜಯ್‌ ತುಂಬಾ ನಾಚಿಕೆ ಸ್ವಭಾವದವರು. ಅವರು (ಸಂಜಯ್‌) ಭೇಟಿಯಾದಾಗಲೆಲ್ಲಾ ತಮಾಷೆ ಮಾಡುತ್ತಿರುತ್ತಾರೆ’ ಎಂದಿದ್ದಾರೆ. 2006ರಲ್ಲಿ ಬಿಡುಗಡೆಯಾದ ‘ಜಿಂದಾ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT