ಭಾನುವಾರ, ಸೆಪ್ಟೆಂಬರ್ 19, 2021
31 °C

ಬೆಲ್ ಬಾಟಂ: ಇಂದಿರಾ ಗಾಂಧಿಯಾಗಿ ಕಾಣಿಸಿಕೊಂಡ ಲಾರಾ ದತ್ತಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Lara Dutta Instagram Post

ಬೆಂಗಳೂರು: ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಂ ಚಿತ್ರ ಆಗಸ್ಟ್ 19ರಂದು ತೆರೆಗೆ ಬರಲು ಸಜ್ಜಾಗಿದೆ.

ಚಿತ್ರ ಬಿಡುಗಡೆ ದಿನಾಂಕ ಕುರಿತು ಅಕ್ಷಯ್ ಕುಮಾರ್ ಇತ್ತೀಚೆಗೆ ಪೋಸ್ಟರ್ ಪ್ರಕಟಿಸಿ ವಿವರ ನೀಡಿದ್ದರು.

ಇದೀಗ ಚಿತ್ರದ ಕುರಿತು ಹೊಸ ಸಂಗತಿಯೊಂದು ಬಹಿರಂಗವಾಗಿದೆ. ಬೆಲ್ ಬಾಟಂನ ಪ್ರಮುಖ ನಟಿಯರಲ್ಲಿ ಒಬ್ಬರಾದ ಲಾರಾ ದತ್ತಾ, ಇಂದಿರಾ ಗಾಂಧಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇಂದಿರಾ ಗಾಂಧಿ ಪಾತ್ರದ ಕುರಿತು ನಟಿ ಲಾರಾ ದತ್ತಾ ಕೂಡ ಸಾಮಾಜಿಕ ತಾಣಗಳ ಮೂಲಕ ಹಂಚಿಕೊಂಡಿದ್ದಾರೆ.

ಅಲ್ಲದೆ, ಲಾರಾ ದತ್ತಾ ಇಂದಿರಾ ಗಾಂಧಿಯಾಗಿ ಬದಲಾದ ಕುರಿತು ಕೂಡ ಕಿರು ವಿಡಿಯೊ ಒಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಲಾರಾ ದತ್ತಾ ಹಂಚಿಕೊಂಡಿದ್ದಾರೆ.

ಮೇಕಪ್ ಮತ್ತು ಮೇಕ್ ಓವರ್ ಕಲಾವಿದರ ಕೈಚಳಕದಿಂದ ನಟಿ ಲಾರಾ ದತ್ತಾ ಇಂದಿರಾ ಗಾಂಧಿಯಾಗಿ ಬದಲಾಗಿರುವುದನ್ನು ಕಂಡು ಅಭಿಮಾನಿಗಳು ಕೂಡ ಅಚ್ಚರಿಗೆ ಒಳಗಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು